Thursday, June 4, 2026
spot_imgspot_img
spot_imgspot_img

ಮಂಗಳೂರು: ಎಸ್ಐಟಿ ಕಚೇರಿಗೆ ಆಗಮಿಸಿದ ಧರ್ಮಸ್ಥಳ ಪ್ರಕರಣದ ದೂರುದಾರ..!

- Advertisement -
- Advertisement -

ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ತನಿಖೆಗೆ ರಚನೆಯಾಗಿರುವ ಎಸ್ಐಟಿ ತಂಡದ ಮುಂದೆ ಹೇಳಿಕೆ ನೀಡಲು ದೂರುದಾರ ಶನಿವಾರ (ಇಂದು)ಆಗಮಿಸಿದ್ದಾನೆ.

ಕದ್ರಿಯಲ್ಲಿರುವ ಐಬಿ ಕಚೇರಿಯಲ್ಲಿ ಎಸ್ಐಟಿ ತನಿಖಾ ಕಚೇರಿಯನ್ನಾಗಿ ಬಳಸಲಾಗುತ್ತಿದ್ದು. ಈಗಾಗಲೇ ನಡೆಯುತ್ತಿರುವ ಸಭೆಯಲ್ಲಿ ಡಿಐಜಿ ಎಂ.ಎನ್.ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ್ ಹಾಗೂ ದ.ಕ, ಉಡುಪಿ, ಉ.ಕ ಜಿಲ್ಲೆಗಳಿಂದ ನೇಮಿಸಲ್ಪಟ್ಟ ತನಿಖಾ ತಂಡದ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಇದರಲ್ಲಿ ಧರ್ಮಸ್ಥಳ, ಎಸ್ಐ, ಮೂಲ್ಕಿ, ಬೈಂದೂರು ಇನ್ಸ್‌ಪೆಕ್ಟರ್‌ಗಳು ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮಲ್ಲಿಕಟ್ಟೆ ಎಸ್‌ಐಟಿ ಕಚೇರಿಗೆ ಪ್ರಕರಣ ದೂರಾದರ ಆಗಮಿಸಿದ್ದು, ತನ್ನ ಹೇಳಿಕೆ ದಾಖಲಿಸಲಿದ್ದಾನೆ ಎಂದು ತಿಳಿದು ಬಂದಿದೆ. ಡಿಸೈರ್ ಗಾಡಿಯಲ್ಲಿ ಇಬ್ಬರು ವಕೀಲರ ಜೊತೆ ಆಗಮಿಸಿದ್ದು, ಈ ಬಾರಿಯೂ ಮುಸುಕುಧಾರಿಯಾಗಿ ಆಗಮಿಸಿದ್ದಾನೆ. ಇತ ನೀಡುವ ಹೇಳಿಕೆ ಇದೀಗ ಭಾರೀ ಮಹತ್ವ ಪಡೆದುಕೊಂಡಿದೆ.

- Advertisement -

Related news

error: Content is protected !!