Monday, May 13, 2024
spot_imgspot_img
spot_imgspot_img

ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಮೂರ್ತಿ ಪ್ರತಿಷ್ಠೆ, ಶ್ರೀ ಶಾರದಾಂಬ ಸಭಾಭವನದ ಲೋಕಾರ್ಪಣೆ

- Advertisement -G L Acharya panikkar
- Advertisement -
astr

ವಿಟ್ಲ: ಇದೊಂದು ಬಹಳ ಸಂತಸದ ಕ್ಷಣವಾಗಿದೆ. ನಮ್ಮ ಹಿಂದೂ ಧರ್ಮಕ್ಕೆ ಉತ್ತಮ ಭವಿಷ್ಯವಿದೆ ಎನ್ನುವುದಕ್ಕೆ ಇಲ್ಲಿ ನಡೆದಿರುವ ಕೆಲಸ ಕಾರ್ಯಗಳೇ ಸಾಕ್ಷಿಯಾಗಿದೆ. ಇಷ್ಟೊಂದು ಸಣ್ಣ ಭಜನಾ ಮಂದಿರ ಈ ಒಂದು ಮಟ್ಟಕ್ಕೆ ಬೆಳೆಯಲು ಭಕ್ತಾಧಿಗಳ ನಿಸ್ವಾರ್ಥ ಸೇವೆಯೇ ಕಾರಣ. ಧಾರ್ಮಿಕತೆಯತ್ತ ಯುವಕರ ಒಲವು ಹೆಚ್ಚಾಗಬೇಕು ಎಂದು ಮಹಾವೀರ ಆಸ್ಪತ್ರೆಯ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ ರವರು ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಡೆದ ೪೦ನೇ ವರುಷದ ನವರಾತ್ರಿ ಉತ್ಸವ, ಶಾರದೋತ್ಸವ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಶಾರದಾಂಬ ಸಭಾಭವನವನ್ನು ದೀಪಬೆಳಗಿಸಿ ಉದ್ಘಾಟಿಸಿ ಬಳಿಕ ನಡೆದ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯ ಪ್ರೈವೇಟ್ ಲಿಮಿಟೆಟ್ ನ ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆ ರವರು ಮಾತನಾಡಿ ಈ ಭಜನಾ ಮಂದಿರ ವರುಷದಿಂದ ವರ್ಷಕ್ಕೆ ಬದಲಾಗುತ್ತಲೇ ಬಂದಿದೆ. ಈ ಎಲ್ಲಾ ಅಭಿವೃದ್ಧಿಗೆ ಈ ಭಾಗದ ಭಕ್ತಾಧಿಗಳ ಪ್ರಯತ್ನವೇ ಕಾರಣವಾಗಿದೆ. ನಾನು ಈ ಊರಿನವನೇ ಆಗಿರುವ ಹಿನ್ನೆಲೆಯಲ್ಲಿ ನನ್ನಿಂದಾದ ಸಹಕಾರವನ್ನು ಮಂದಿರಕ್ಕೆ ನೀಡಿದ್ದೇನೆ. ಅತ್ಯಲ್ಪ ಸಮಯದಲ್ಲಿ ಇಷ್ಟೊಂದು ದೊಡ್ಡ ಕೆಲಸವನ್ನು ಮಾಡಿರುವುದು ಕುಶಿ ತಂದಿದೆ ಎಂದರು.

ಮಂಗಳೂರು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟುರವರು ಮಾತನಾಡಿ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ತುಂಬಾ ಸಂತಸ ತಂದಿದೆ. ಇಲ್ಲಿನ ಶಾರದಾ ಮಾತೆಯನ್ನು ನೋಡಿದಾಗ ಮನಸ್ಸಿಗೆ ನೆಮ್ಮದಿಯಾಗುತ್ತಿದೆ. ಇದೊಂದು ಭಜನಾ ಮಂದಿರವಾಗಿದ್ದರೂ ಕ್ಷೇತ್ರದಂತೆ ಕಾಣುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಅಭಿವೃದ್ದಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಿಂದೂ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವ ಮನಸ್ಸು ನಮ್ಮದಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ಮು ತಾವು ತೊಡಗಿಸಿಕೊಳ್ಳುವ ಅಗತ್ಯತೆ ಬಹಳಷ್ಟಿದೆ. ಕ್ಷೇತ್ರ ಇನ್ನಷ್ಟು ಬೆಳಗಲಿ ಎಂದು ಶುಭಹಾರೈಸಿದರು.

ಧಾರ್ಮಿಕ‌ ಕ್ಷೇತ್ರದಲ್ಲಿ ಯುವಕರ ಪಾತ್ರದ ವಿಚಾರವಾಗಿ ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕ ನಾರಾಯಣ ಪೂಜಾರಿ ಪಿಲಿಂಜ ಧಾರ್ಮಿಕ ಉಪನ್ಯಾಸ ನೀಡಿ ತಂದೆ ತಾಯಿ ಗುರು ಹಿರಿಯನ್ನು ಮರೆಯದೆ ನೆನೆಯುವ ಕೆಲಸವಾಗಬೇಕು. ಮಕ್ಕಳು ಧಾರ್ಮಿಕತೆಯತ್ತ ಹೆಚ್ಚಾಗಿ ಒಲವು ತೋರಬೇಕು. ವಿದ್ಯಾರ್ಥಿಗಳು ಮೊಬೈಲ್ ಎಂಬ ಮಾಯಾಪೆಟ್ಟಿಗೆಯನ್ನು ಬಿಟ್ಟು ಧಾರ್ಮಿಕ ಗಮನ ಹರಿಸುವುದು ಅಗತ್ಯ. ಬಾಳಿ ಬದುಕಬೇಕಾದ ನಾವು ನಮ್ಮ ಜೀವನವನ್ನು ಹಾಳು ಮಾಡಬಾರದು. ಮೂಲ ಸಂಸ್ಕೃತಿಯನ್ನು ಮರೆತರೆ ನಾವು ಮೂಲೆಗುಂಪಾಗಬಹುದು. ಮೂಲ‌ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಕೆಲಸ ಎಲ್ಲರಿಂದಲೂ ಆಗಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಭಾ ಭವನ ನಿರ್ಮಾಣದಲ್ಲಿ ಸಹಕರಿಸಿದ ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕಾರಾದ ದಿವಾಕರ ದಾಸ್ ನೇರ್ಲಾಜೆ, ರವಿ ವಾಲ್ಟರ್ ಡಿಸೊಜ, ಶೇಖರ ಪರೆಂಗಿಪೇಟೆ, ಅಶೋಕ ಹೊಸಮಾರು ಹಾಗೂ ಸುಮಲತಾ ದಂಪತಿ, ಸತೀಶ್ ನಾಯ್ಕ್ ಅಳಕೆಮಜಲು, ಹರೀಶ್ ನಾಯ್ಕ್ ಅಳಕೆಮಜಲು, ಶಿವಪ್ಪ ನಾಯ್ಕ್ ಅಳಕೆಮಜಲು, ಲಿಂಗಪ್ಪ ಗೌಡ ಪೆಲತ್ತಿಂಜ, ಸುಂದರ ಪೂಜಾರಿ ಪೆಲತ್ತಿಂಜ, ಕೃಷ್ಣಪ್ಪ ಮೂಲ್ಯ ಪುಂಡಿಕಾಯಿ, ಮೋನಪ್ಪ ಮೂಲ್ಯ ಕೋಲ್ಪೆಗುತ್ತು, ಭಾಸ್ಕರ ರೈ ವಿಟ್ಲ, ನಾಗೇಶ್ ಕುಂಡಡ್ಕ, ಸಂಜೀವ ಪೆಲತ್ತಿಂಜ, ಮಿಥುನ್ ಓಜಾಲ ಶಾರದಾಂಬ ಭಜನಾ ಮಂಡಳಿಯ ಅಧ್ಯಕ್ಷರಾದ ಜಗದೀಶ ಪೂಜಾರಿ ಅಳಕೆಮಜಲು ಹಾಗೂ ಅವರ ಪತ್ನಿ ಪ್ರತಿಮಾ ಜಗದೀಶ್ ಪೂಜಾರಿ ರವರನ್ನು ಸನ್ಮಾನಿಸಲಾಯಿತು. ಕೆಲಸ ಕಾರ್ಯಗಳಲ್ಲಿ ಸಹಕರಿಸಿದವರನ್ನು ಈ ಸಂದರ್ಭದಲ್ಲಿ ಶಾಲುಹೊದಿಸಿ ಗೌರವಿಸಲಾಯಿತು.

ಭಜನಾ ಮಂಡಳಿಯ ಗೌರವ ಸಲಹೆಗಾರರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಹಲವರು ವರುಷಗಳ ಹಿಂದೆ ಆರಂಭವಾದ ಈ ಭಜನಾ ಮಂದಿರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ೪೦ ನೇ ವರ್ಷದ ನವರಾತ್ರಿ ಉತ್ಸವ ಹಾಗೂ ಶಾರದೋತ್ಸವದಲ್ಲಿ ಸಂಭ್ರಮದಲ್ಲಿ ನಾವಿದ್ದೇವೆ. ಈ ಸುಸಂದರ್ಭದಲ್ಲಿ ನಮ್ಮ ಕನಸಿನ ಕಲಾಮಂದಿರ ನಿರ್ಮಾಣವಾಗಿ, ಲೋಕಾರ್ಪಣೆ ಯಾಗಿದೆ. ಮನಸ್ಸು ತುಂಬಿದೆ. ಹಲವರ ಪ್ರಯತ್ನಗಳು ಇಂದಿಲ್ಲಿ ಸಾಕಾರವಾಗಿದೆ. ಊರ ಪರವೂರ ಹಲವರ ಸಹಕಾರದಿಂದಾಗಿ ಈ ಒಂದು ಸುಂದರ ಕಟ್ಟಡ ನಿರ್ಮಾಣವಾಗಲು ಸಾಧ್ಯವಾಗಿದೆ. ನಮ್ಮ ಸಭಾಭವನದಲ್ಲಿ ೧೦೦೦ ಆಸನ ಸಾಮರ್ಥ್ಯ, ವಿಶಾಲವಾದ ಪಾಕಶಾಲೆ, ಊಟಕ್ಕೆ ಪ್ರತ್ಯೇಕ ಕೊಠಡಿ, ವಿಶಾಲವಾದ ಪಾರ್ಕಿಂಗ್, ಗಾಳಿ ಬೆಳಕಿನ ವ್ಯವಸ್ಥೆ, ಪಾತ್ರೆ ಹಾಗೂ ಆಸನದ ವ್ಯವಸ್ಥೆ ಸೇರಿದಂತೆ ಈಗಿನ ಕಾಲಘಟ್ಟಕ್ಕೆ ತಕ್ಕದಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸಭಾಭವನವನ್ನು ಸ್ಥಳೀಯ ಮದುವೆ, ಇನ್ನಿತರ ಸಮಾರಂಭಗಳಿಗೆ ಬಾಡಿಗೆ ಸಭಾಂಗಣವಾಗಿಯೂ ಸಾರ್ವಜನಿಕ ಉಪಯೋಗವಾಗಲಿದೆ. ಮುಂದಿನ ದಿನಗಳಲ್ಲಿ ಸಭಾಂಗಣದ ಒಳಭಾಗದಲ್ಲಿ ಇರುವ ದೇವರ ಗರ್ಬಗುಡಿಯನ್ನು ಹೊರಭಾಗದಲ್ಲಿ ನಿರ್ಮಿಸುವ ಯೋಚನೆಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕೂ ಎಲ್ಲರ ಸಹಕಾರ ಅಗತ್ಯ ಎಂದರು.

ಶ್ರೀ ಶಾರದಾಂಬ ಭಜನಾ ಮಂಡಳಿಯ ಅಧ್ಯಕ್ಷರಾದ ಜಗದೀಶ್ ಪೂಜಾರಿ ಅಳಕೆಮಜಲು, ಕಾರ್ಯದರ್ಶಿ ತಿರುಮಲೇಶ್ವರ ನಾಯ್ಕ್ ಅಳಕೆಮಜಲು, ಶ್ರೀ ಶಾರದಾಂಬ ಮಹಿಳಾ ಸಮಿತಿಯ ಅಧ್ಯಕ್ಷರಾದ ಸುಗಂಧಿನಿ, ರವಿ ವಾಲ್ಟರ್ ಡಿಸೊಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಜೇತ್ ಪೆಲತ್ತಿಂಜ, ಪ್ರದೀಪ್ ಶೆಟ್ಟಿ, ನಾರಾಯಣ ಪೂಜಾರಿ ಕಟ್ನಾಜೆ, ದಾಮೋಧರ ಪೂಜಾರಿ ಹೊಸಮಾರು, ಪ್ರದೀಪ್ ಉರಿಮಜಲು, ದಿನೇಶ್ ಪೆಲತ್ತಿಂಜ, ಅಶೋಕ್ ಆಚಾರ್ಯ ಅಳಕೆಮಜಲು, ರಾಧಾ ಬಾಳಪ್ಪ ನಾಯ್ಕ್ ಮೊದಲಾದವರು ಅತಿಥಿಗಳನ್ನು ಶಾಲುಹೊದಿಸಿ ಗೌರವಿಸಿದರು. ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾದ ಚಿದಾನಂದ ಪೆಲತ್ತಿಂಜ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಖಾಜಾಂಜಿ ಸುಧೀರ್ ನಾಯ್ಕ್ ಕೆಮನಾಜೆ ಸನ್ಮಾನಿತರ ಪಟ್ಟಿವಾಚಿಸಿದರು. ಶ್ಯಾಮ್ ಕಿರಣ್ ಪೆಲತ್ತಿಂಜ ಪ್ರಾರ್ಥಿಸಿದರು.ಉದಯ ಕುಲಾಲ್ ಪುಂಡಿಕಾಯಿ ವಂದಿಸಿದರು.

ಅ.೩ರಂದು ಬೆಳಗ್ಗೆ ಪೂಜಾ ಸೇವೆ ಆರಂಭಗೊಂಡಿತು, ಬಳಿಕ ಶ್ರೀ ಶಾರದಾಂಬ ಮಕ್ಕಳ ಭಜನಾ ತಂಡ ಅಶೋಕನಗರ ಇವರಿಂದ ಭಜನೆ ನಡೆಯಿತು, ಮಧ್ಯಾಹ್ನ ಮಾಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು. ಸಾಯಂಕಾಲ ಭಜನೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಕಲ್ಜಿಗದ ಕಾಳಿ ಪಂತ್ರದೇವತೆ’ ತುಳು ನಾಟಕ ನಡೆಯಿತು.

vtv vitla
- Advertisement -

Related news

error: Content is protected !!