Thursday, April 25, 2024
spot_imgspot_img
spot_imgspot_img

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

- Advertisement -G L Acharya panikkar
- Advertisement -

ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ ನಂ.3628 ಇಲ್ಲಿನ ವಾರ್ಷಿಕ ಮಹಾಸಭೆಯು ಇಡ್ಕಿದು ಸೇವಾ ಸಹಕಾರಿ ಸಂಘದ ಕೇಂದ್ರ ಕಛೇರಿ ಉರಿಮಜಲಿನಲ್ಲಿ ನಡೆಯಿತು.

ಇಡ್ಕಿದು ಸೇವಾ ಸಹಕಾರಿ ಸಂಘ (ನಿ) ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಈ ಸಂದರ್ಭದಲ್ಲಿ ಸುಧಾಕರ ಶೆಟ್ಟಿ ಬೀಡಿನಮಜಲು ಮಾತನಾಡಿ ನಿಮ್ಮೆಲ್ಲರ ಸಹಕಾರದಿಂದ ಇಂದು ನಮ್ಮ ಸಹಕಾರಿ ಸಂಘ 100 ವರ್ಷದ ಸಂಭ್ರಮದೊದಿಗೆ ಹಲವು ಸಾಧನೆಗಳ ಜೊತೆಗೆ ಹೆಜ್ಜೆಹಾಕುತ್ತಿದೆ. ಕಳೆದ ಶತಾಮೃತ ಉದ್ಘಾಟನೆಯ ಸಂದರ್ಭದಲ್ಲಿ ಹೇಳಿದಂತೆ ಮೂರು ಯೋಜನೆಗಳನ್ನು ಕೈಗೊಂಡಿದ್ದೇವೆ, ಅವುಗಳೆಂದರೆ, 1.ಉದ್ಯೋಗಾಮೃತ (ಉದ್ಯೋಗ ನೈಪುಣ್ಯ ತರಭೇತಿ), 2. ವಿದ್ಯಾಮೃತ ( ಈಗಾಗಲೇ 10 ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣದವರೆಗಿನ ವೆಚ್ಚವನ್ನು ಭರಿಸುವುದು), 3.ಆರೋಗ್ಯಾಮೃತ (ಗ್ರಾಮದ ತಜ್ಞ ವೈದ್ಯರ ಸಹಕಾರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು 3 ಯೋಜನೆಗನ್ನು ಘೋಷಿಸಿ, ಅವುಗಳ ಬಗ್ಗೆ ಬಗ್ಗೆ ವಿವರವಾಗಿ ತಿಳಿಸಿದರು. ಈ ವೇಳೆ 11% ಡೆವಿಡೆಂಟ್ ಘೋಷಿಸಿದರು. ಈ ಸಾಲಿನಲ್ಲಿ ಸಂಘವು ಒಟ್ಟು 1ಕೋಟಿ 25 ಲಕ್ಷಕ್ಕೂ ಅಧಿಕ ಲಾಭಾಂಶ ಗಳಿಸಿದ್ದು ಸಾಧನೆಯಾಗಿದೆ.

ಈ ಸಂದರ್ಭದಲ್ಲಿ ಸಹಕಾರಿ ಸಂಘದ 10 ಜನ ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಇಡ್ಕಿದು, ಕುಳ ಗ್ರಾಮದ ನಿವಾಸಿಗಳಾದ 7 ಜನ ಪವರ್‌ಮೆನ್‌ಗಳನ್ನು ಸನ್ಮಾನಿಸಿ ಗೌರವಿಸಿದರು. 2021-22 ನೇ ಸಾಲಿನಲ್ಲಿ ಕುಳ, ಇಡ್ಕಿದು ವ್ಯಾಪ್ತಿಯ ಪ್ರಾಥಮಿಕ, ಪ್ರೌಢ ಶಾಲೆಗಳಿಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. 2021-22 ನೇ ಸಾಲಿನಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ವ್ಯಾಪಾರ ವಿಭಾಗದಲ್ಲಿ ಅತೀ ಹೆಚ್ಚು ವ್ಯಾಪಾರ ಮಾಡಿದವರಿಗೆ ನಗದು ಪುಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. 2021-22 ನೇ ಸಾಲಿನಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ಕ್ಯಾಂಪ್ಕೋ ವಿಭಾಗದಲ್ಲಿ ಹೆಚ್ಚು ವಹಿವಾಟು ಮಾಡಿದವರನ್ನು ಗೌರವಿಸಲಾಯಿತು. ಹಾಗೂ ನವೋದಯ ಸ್ವಸಹಾಯಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಮಹಾಸಭೆಯಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಮ್ ಭಟ್ ನೀರಪಳಿಕೆ, ನಿರ್ದೇಶಕರುಗಳಾದ ನಾರಾಯಣ ನೇರ್ಲಾಜೆ, ಪ್ರವೀಣ್ ಕುಮಾರ್ ಕೊಪ್ಪಲ, ಜಯಂತ ಡಿ, ಸುಂದರ ಪಿ.ಪಾಂಡೇಲು, ಶಿವಪ್ರಕಾಶ್ ಕೆ.ವಿ ಕೊವೆತ್ತಿಲ, ಜನಾರ್ಧನ ಪೂಜಾರಿ ಕಾರ್ಯಾಡಿ, ವಸಂತ ಉರಿಮಜಲು, ಶೇಖರ ನಾಯ್ಕ, ಶ್ರೀಮತಿ ನಳಿನಿ ಪೆಲತ್ತಿಂಜ, ಶ್ರೀಮತಿ ವಿಜಯಲಕ್ಷ್ಮೀ ಪಿಲಿಪ್ಪೆ, ಶ್ರೀಮತಿ ರತ್ನ ಸೇಕೆಹಿತ್ತಿಲು, ವೃತ್ತಿಪರ ನಿರ್ದೇಶಕ ಗೋಪಾಲಕೃಷ್ಣ ಭಟ್ ಎಂ. ಮಿತ್ತೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಎಸ್, ರವೀಂದ್ರ, ರಾಜೇಶ ಕಾರ್ಯಾಡಿ, ನಾಗೇಶ ಪಿ. ಕುಂಡಡ್ಕ, ಮಾಜಿ ಅಧ್ಯಕ್ಷರುಗಳಾದ ಕೊಂಕೋಡಿ ಪದ್ಮನಾಭ ಭಟ್, ಸುಬ್ರಹ್ಮಣ್ಯ ಭಟ್ ಉರಿಮಜಲು, ಸುಬ್ರಾಯ ಭಟ್ ಕೊಂಕೋಡಿ, ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಎಸ್ ವರದಿ ಮಂಡಿಸಿದರು. ಇಡ್ಕಿದು ಸೇವಾ ಸಹಕಾರಿ ಸಂಘ (ನಿ) ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು ಸ್ವಾಗತಿದರು. ಈಶ್ವರ ಕುಲಾಲ್ ನಿರೂಪಿಸಿದರು.

astr
- Advertisement -

Related news

error: Content is protected !!