Wednesday, April 24, 2024
spot_imgspot_img
spot_imgspot_img

ವಿಟ್ಲ: ಕಣಜ ಹುಳುಗಳ ಕಡಿತದಿಂದ ಗಾಯಗೊಂಡ ಬಾಲಕ; ದಾರಿ ಮಾಲಕ ಹಾಗೂ ಗ್ರಾ.ಪಂ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

- Advertisement -G L Acharya panikkar
- Advertisement -
vtv vitla

ವಿಟ್ಲ: ಇತ್ತೀಚೆಗೆ ಕಣಜ ಹುಳುಗಳ ಕಡಿತದಿಂದ ಸಾವನ್ನಪ್ಪಿದ ಘಟನೆಯನ್ನು ಹಲವು ಕಡೆಗಳಲ್ಲಿ ನಾವು ಕಂಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ಕಣಜಹುಳುಗಳ ಗೂಡು ಸಾರ್ವಜನಿಕರು ಹೋಗುವ ದಾರಿ ನಡುವೆಯೇ ಇದ್ದರೂ ಈ ಬಗ್ಗೆ ದಾರಿ ಮಾಲಕರು ಹಾಗೂ ಗ್ರಾಮ ಪಂಚಾಯತ್ ಯಾವುದೇ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂಬುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಕುಂರ್ಬಲ ದೆಪ್ಪಿನಿ ರಸ್ತೆಯಲ್ಲಿ ನಡೆದಿದೆ.

ಕಳೆದ 2 ವಾರಗಳಿಂದ ಕುಂರ್ಬಲ ದೆಪ್ಪಿನಿ ರಸ್ತೆ ಬದಿಯ ಗಂಗಯ್ಯ ಪುರುಷ ಇವರ ಜಾಗದಲ್ಲಿ ಕಣಜ ಹುಳುಗಳ ಗುಂಪೊ0ದು ಮರದ ರೆಂಬೆಯಲ್ಲಿ ವಾಸಿಸುತ್ತಿದ್ದು ಈ ಬಗ್ಗೆ ಸ್ಥಳೀಯರು ದಾರಿ ಮಾಲೀಕರಿಗೆ ಹಾಗೂ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ರು.

ಈ ಬಗ್ಗೆ ಜಾಗದ ಮಾಲಿಕರು ಹಾಗೂ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಯಾವುದೇ ರೀತಿಯ ಗಮನ ಹರಿಸಿರಲಿಲ್ಲ. ಇದೀಗ ಮರ ಕಡಿಯುವ ಯಂತ್ರದ ಶಬ್ಧದಿಂದ ಕಣಜ ಹುಳುಗಳು ರೊಚ್ಚಿಗೆದ್ದಿದ್ದು, ದಾರಿ ಮಧ್ಯೆ ಹೋಗುತ್ತಿದ್ದ ಸ್ಥಳೀಯ ಬಾಲಕ ರಿತ್ವಿಕ್ (10) ಎಂಬಾತ ಕಣಜ ಹುಳುಗಳ ಕಡಿತಕ್ಕೆ ಒಳಗಾಗಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ರಿತ್ವಿಕ್ ಅವರ ತಂದೆ ಲೋಕನಾಥ ಕುಂರ್ಬಲ, ದಾರಿ ಮಾಲಕರ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!