Monday, May 20, 2024
spot_imgspot_img
spot_imgspot_img

ವಿಟ್ಲ: ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ; ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಅಸಮಾಧಾನ!

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ವಿಟ್ಲ : ವಿಟ್ಟ ಹೋಬಳಿ ವ್ಯಾಪ್ತಿಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ವಿಟ್ಲ ಪಟ್ಟಣ ಪಂಚಾಯತು ಕಛೇರಿಯಲ್ಲಿ ಮತದಾನ ನಡೆಯುತ್ತಿದ್ದು, ಮತದಾರರು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಲು ಆಗಮಿಸುತ್ತಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಹುದ್ದೆಗೆ ದಾಖಲೆಯ 21 ಸದಸ್ಯರು ಚುನಾವಣೆಗೆ ನಿಂತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಪ್ರದೀಪ್ ಕುಮಾರ್ ಕಲ್ಕೂರ ಚುನಾವಣೆಯಲ್ಲಿ ಇರದೇ ಇರುವುದರಿಂದ ಇಬ್ಬರು ಸ್ಪರ್ದಾಳುಗಳ ಮಧ್ಯೆ ಚುನಾವಣೆ ಗರಿಗೆದರಿದೆ. ಎಂ.ಆರ್.ವಾಸುದೇವ ಹಾಗೂ ಎಂ.ಪಿ.ಶ್ರೀನಾಥ್ ಜಿಲ್ಲಾಧ್ಯಕ್ಷ ಸ್ನಾನದ ಕಣದಲ್ಲಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ: ಮತದಾನ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ವಿಟ್ಲದ ಮತಗಟ್ಟೆಗೆ ಬಂದ ಬಿ.ಸತೀಶ್ ಆಳ್ವ ಕಡಂಬು ಅವರು ಮತದಾನ ಮಾಡದೇ ನಿರಾಶೆಯಿಂದ ಹಿಂತಿರುಗಿದ್ದಾರೆ. ಅವರ ಹೆಸರು ಮತದಾನ ಪಟ್ಟಿಯಲ್ಲಿರಲಿಲ್ಲ.ಬಂಟ್ವಾಳ ವ್ಯಾಪ್ತಿಯ ಪಟ್ಟಿ ಹೆಸರಿದ್ದು, ಬಂಟ್ವಾಳ ಮತಗಟ್ಟೆಗೆ ತೆರಳುವಂತೆ ಅಧಿಕಾರಿಗಳು ಅವರಿಗೆ ಸೂಚಿಸಿದ್ದಾರೆ. ಈ ಬಗ್ಗೆ ಸತೀಶ್ ಆಳ್ವ ಅವರು ಅಸಮಾಧಾನ ವ್ಯಕ್ತಪಡಿಸಿದರು.

vtv vitla
- Advertisement -

Related news

error: Content is protected !!