Friday, May 17, 2024
spot_imgspot_img
spot_imgspot_img

ವಿಟ್ಲ: ಕನ್ಯಾನದಲ್ಲಿ ಬಾಲಕನ ಮೇಲೆ ಜೆಸಿಬಿ ಹಾಯಿಸಿದ ನರಪಾತಕನ ಬ್ಯಾಗ್ರೌಂಡ್ ಸ್ಟೋರಿ ಎಲ್ಲರನ್ನು ಬೆಚ್ಚಿಬೀಳಿಸುತ್ತೆ..!?

- Advertisement -G L Acharya panikkar
- Advertisement -

ತನ್ನೂರಿನಲ್ಲಿ ಪತ್ರಕರ್ತನ ಹಾಗೂ ಪತ್ರಕರ್ತ ಕುಟುಂಬದವರ ಮೇಲೆ ಹಲ್ಲೆ ನಡೆಸಿದ.! ನಮ್ಮೂರಿನಲ್ಲಿ ಬಾಲಕನ ಮೇಲೆ ಜೆಸಿಬಿ ಚಲಾಯಿಸಿ ಬಾಲಕನನ್ನು ಕೊಂದೇ ಬಿಟ್ಟ. ಲವ್ ಸೆಕ್ಸ್ ದೋಖಾ. ಕಛೇರಿಯಲ್ಲಿ ಕುಡುಕನ ಕಾಮುಕನ ಸರಸ ಸಲ್ಲಾಪ, ಬೀದಿ ತುಂಬೆಲ್ಲಾ ಈತನದ್ದೆ ಅಟ್ಟಹಾಸ. ಅಯ್ಯೋ ಇಂತಹ ಕೃತ್ಯ ಎಸಗಿದ ನರಪಾತಕನಾದ್ರೂ ಯಾರು? ಆತನ ಹಿನ್ನಲೆಯೇನು ಎಂಬುವುದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದ ನಿವಾಸಿ ಬಾಷಾಸಾಬ ಅಬ್ದುಲ್ ಸಾಬ ವಡ್ಡಟ್ಟಿ ಅಲಿಯಾಸ್ ಸಾದೀಕ್ ಬಾಷಾ ಎಂಬಾತನೇ ಇಂತಹ ಕ್ರೂರ ಕೃತ್ಯ ಎಸಗಿದ ರಾಕ್ಷಸ. ಪತ್ರಕರ್ತನ ಹಾಗೂ ಪತ್ರಕರ್ತನ ಕುಟುಂಬದವರ ಮೇಲೆ ಹಲ್ಲೆಗೊಳಿಸಿ ಈಗಾಗಲೆ ಗದಗ ಜಿಲ್ಲೆಯಲ್ಲಿ ಸಾಕಷ್ಟು ಸುದ್ದಿಯಾಗಿದ್ದ. ಇದೀಗ ಜೆ.ಸಿ.ಬಿ ಹಾಯಿಸಿದ ಆರೋಪದ ಮೇಲೆ ಎಲ್ಲಕಡೆ ಚರ್ಚೆಯಾಗುತ್ತಿದ್ದಾನೆ. ಸದಾ ಪಾನಮತ್ತನಾಗುವ ಈತ ಒಂದಲ್ಲೊಂದು ಕ್ರಿಮಿನಲ್ ಕೆಲಸಗಳನ್ನು ಮಾಡುತ್ತಾ ಇರುತ್ತಾನೆ. ಇದಕ್ಕೆ ಸಾಕ್ಷಿ ಎಂಬಂತೆ ಹೇಮರಡ್ಡಿ ಬೆಟಗೇರಿ ಎಂಬ ಯುವಕನ ಮೇಲೆ ಈತ ಹಾಗೂ ಇವನ ತಂದೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾಗಿದ್ದ ಹೇಮರಡ್ಡಿ ಬೆಟಗೇರಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತಂತೆ ಗ್ರಾಮಸ್ಥರು ರಾಜೀ ಮಾಡಿ ಬುದ್ದಿ ಹೇಳಿ ಕಳುಹಿಸಿದ್ದರು.

ಕಛೇರಿಯಲ್ಲಿ ಕುಡುಕ ಕಾಮುಕನ ಸರಸ ಸಲ್ಲಾಪ..!
ಎಲ್ ಆ್ಯಂಡ್ ಟಿ ಕಂಪನಿಯ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಉದ್ಯೋಗಿಯಾಗಿದ್ದ ಬಾಷಾಸಾಬ ವಡ್ಡಟ್ಟಿ ಕುಡಿಯುವ ನೀರು ಸರಬರಾಜು ಮಾಡುವ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಈ ಕಛೇರಿಯಲ್ಲಿಯೇ ಮದ್ಯಪಾನ ಮಾಡಿ ಹುಡುಗಿಯರ ಜೊತೆ ಸರಸ ಸಲ್ಲಾಪವಾಡುತ್ತಿದ್ದ. ಈ ಕುಡುಕ ಕಾಮುಕ ಎಲ್ಲದಕ್ಕೂ ಈ ಕಚೇರಿಯನ್ನು ಬಳಸಿಕೊಳ್ಳುತ್ತಿದ್ದ. ಇದನ್ನು ಗಮನಿಸುತ್ತಿದ್ದ ಸ್ಥಳೀಯರು ಈ ಬಗ್ಗೆ ಸ್ಥಳೀಯ ಪತ್ರಕರ್ತರಿಗೆ ಸಾಕ್ಷಿ ಸಮೇತ ಮಾಹಿತಿ ಒದಗಿಸಿದ್ದರು. ಈ ಮಾಹಿತಿಯ ಮೇರೆಗೆ ಪತ್ರಕರ್ತ ಬಸವರಾಜ ಬೆನ್ನೂರ ಈ ಬಗ್ಗೆ ಕಛೇರಿಯ ಮೇಲಾಧಿಕಾರಿಗಳಿಗೆ ದೂರನ್ನು ನೀಡಿದ್ದರು.

ಈ ಸಂದರ್ಭದಲ್ಲಿ ದೂರು ನೀಡಿದ ಪತ್ರಕರ್ತರ ಮೇಲೆ ಮದ್ಯದ ಅಮಲಿನಲ್ಲಿ ಹಲ್ಲೆ ಮಾಡಿದ್ದ. ತಾನೂ ಮಾತ್ರವಲ್ಲದೆ ತನ್ನ ಕುಟುಂಬದವರನ್ನೂ ಸಹ ಕರೆದುಕೊಂಡು ಬಂದು ಪತ್ರಕರ್ತನನ್ನು ಹತ್ಯೆ ಮಾಡುವ ಪ್ರಯತ್ನ ಮಾಡಿದ್ದಾನೆ. ಅದಲ್ಲದೆ ಪತ್ರಕರ್ತನ ತಾಯಿ ಮೇಲೆಯೂ ಹಲ್ಲೆ ಮಾಡಿದ್ದಾನೆ. ಈ ಕುರಿತಂತೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಬಾಷಾಸಾಬ ಎಂಬ ನರರಾಕ್ಷಸನ ವಿರುದ್ಧ ಪ್ರಕರಣ ದಾಖಲಾಗಿದೆ.

ಜಾಮೀನಿನ ಮೂಲಕ ಹೊರಬಂದು ಮತ್ತದೇ ದುಷ್ಕೃತ್ಯ
ಅದಾದ ಕೆಲ ತಿಂಗಳ ಬಳಿಕ ಜಾಮೀನನ ಮೂಲಕ ಹೊರಬಂದ ಈತ ಮತ್ತೊಮ್ಮೆ ಅದೇ ಪತ್ರಕರ್ತನ ಮನೆಗೆ ಹೋಗಿ ಅವರ ತಾಯಿಯನ್ನು ನಿಂದಿಸಿದ್ದ. ಅದರಂತೆ ಮತ್ತೊಂದು ಬಾರಿ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಇವನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ ನಾಯಿ ಬಾಲ ಡೊಂಕು ಎಂಬಂತೆ ತನ್ನ ಹಳೆ ಛಾಳಿಯನ್ನೇ ಮುಂದುವರೆಸಿದ್ದ. ಬಾಷಾಸಾಬ ದಾರವಾಡ ಮೂಲದ ಯುವತಿಯೊಬ್ಬಳಿಗೆ ಪ್ರೀತಿಸುವುದಾಗಿ ಹೇಳಿ ಆಕೆಯೊಂದಿಗೆ ದೈಹಿಕ ಸಂಬಂದಬೆಳೆಸಿ ಖಾಸಗಿ ಕ್ಷಣದ ವಿಡಿಯೋ ಮಾಡಿಕೊಂಡು ಆಕೆಗೆ ಹಣಕೊಡುವಂತೆ ಬ್ಲಾಕ್ ಮೇಲ್ ಮಾಡಿ ಯುವತಿಯಿಂದ ಸುಮಾರು 60 ಸಾವಿರ ರೂ. ಲಪಟಾಯಿಸಿದ್ದ.

ವಂಚನೆಗೊಳಗಾದ ಯುವತಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಳು. ಈ ಬಗ್ಗೆ ಯುವತಿ ತನಗೆ ಸುರಕ್ಷತೆಯ ಜೊತೆಗೆ ನ್ಯಾಯ ಒದಗಿಸಿಕೊಡುವಂತೆ ಸ್ಥಳೀಯರಲ್ಲಿ ಹೇಳಿಕೊಂಡಾಗ ಸ್ಥಳೀಯರು ಅವನನ್ನು ಕರೆದು ಬ್ಲಾಕ್ ಮೇಲ್ ಮಾಡಿ ಪಡೆದಿದ್ದ 60 ಸಾವಿರ ರೂ ಗಳನ್ನು ಆತನಿಂದ ಮತ್ತೆ ಪಡೆದು ಯುವತಿಯ ಕೈಗೆ ನೀಡಿದ್ದರು. ಅಲ್ಲದೆ ನೀತಿ ಪಾಠ ಹೇಳಿ ಯುವತಿಯ ತಂಟೆಗೆ ಬಾರದಂತೆ ಖಡಕ್ ವಾರ್ನಿಂಗ್ ನೀಡಿದ್ದರು.

ಇದಾದ ಬಳಿಕ ತನ್ನೂರಲೆಲ್ಲಾ ಮದ್ಯಪಾನ ಮಾಡಿ ಊರಲ್ಲೆಲ್ಲಾ ರಾಜಾರೋಷವಾಗಿ ಬೈಕ್‌ನಲ್ಲಿ ಸುತ್ತಾಡಿಕೊಂಡು , ಯುವತಿಯರಿಗೆ ಛೇಡಿಸುವುದಯ ,ಅಶ್ಲೀಲ ಶಬ್ದಗಳಿಂದ ಮಾತನಾಡುವುದು ಇಂತಹ ಪೋಲಿ ಬುದ್ದಿಯನ್ನು ತೋರಿಸ್ತಾ ಇದ್ದ. ಈತ ಅದೇಷ್ಟೇ ಕ್ರಿಮಿನಲ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರೂ ಇವನಿಗೆ ಕಾನೂನು ಭಯವಿಲ್ಲ. ಪತ್ರಕರ್ತನ ಹ್ಲಲೆ ಪ್ರಕರಣವು ಇನ್ನೂ ವಿಚಾರಣೆ ಹಂತದಲ್ಲಿದೆ. ಈತನ ಹಿಂದೆ ಬಲವಾದ ಕೈಗಳಿರುವುದರಿಂದ ಏನೇ ಮಾಡಿದರೂ ತಪ್ಪಿಸಿಕೊಳ್ಳುತ್ತಿದ್ದಾನೆ. ನ್ಯಾಯಾಲಯಕ್ಕೂ ಹಾಜರಾಗುತ್ತಿಲ್ಲ ಈ ಭೂಪ. ಈತನ ಗೂಂಡಾ ವರ್ತನೆಗೆ ಗ್ರಾಮಸ್ಥರು ಬೇಸತ್ತು ಹೋಗಿದ್ದರೂ ಈತನನ್ನು ಹೇಳೋರಿಲ್ಲ ಕೇಳೋರಿಲ್ಲ ಎಂಬಂತೆ ಒಡಾಡ್ತಾ ಇದ್ದಾನೆ.

ಜೆಸಿಬಿ ಹತ್ತಿಸಿ ಬಾಲಕನನ್ನು ಕೊಲೆಗೈದ ಪಾತಕಿ
ಇತ್ತೀಚೆಗೆ ಗದಗದಿಂದ ಕಾಲ್ಕಿತ್ತ ಈತ ದಕ್ಷಿಣ ಕನ್ನಡದಲ್ಲಿ ಬಂದು ಜೆಸಿಬಿ ಡ್ರೈವರ್ ಆಗಿ ಕೆಲಸ ಮಾಡ್ತಾ ಇದ್ದ. ವಿಟ್ಲ ಸಮೀಪದ ಕನ್ಯಾನ್ಯದ ಕಣಿಯೂರಿನ ಉದ್ಯಮಿಯೊಬ್ಬರ ಮನೆಗೆ ಜೆಸಿಬಿ ಕೆಲಸಕ್ಕೆಂದು ಬಂದ ಈತ ತನ್ನ ನೀಚ ರಾಕ್ಷಸ ಬುದ್ದಿಯನ್ನು ಇಲ್ಲೂ ತೋರಿಸಿದ್ದ. ಉದ್ಯಮಿಯ ಮನೆಗೆ ಜೆಸಿಬಿ ಕೆಲಸಕ್ಕೆಂದು ಬರುತ್ತಿದ್ದ ಈತ ಕುಡಿದ ನಶೆಯಲ್ಲೇ ಜೆಸಿಬಿ ಡ್ರೈವಿಂಗ್ ಮಾಡಿಕೊಂಡು ಬಂದು ಎದುರಿನಲ್ಲಿ ಬರುತ್ತಿದ ಸೈಕಲ್ ಸಾವರ 1
3 ವರ್ಷದ ಬಾಲಕ ಅಖಿಲ್ ಎಂಬಾತನಿಗೆ ಡಿಕ್ಕಿ ಹೊಡೆದಿದ್ದಾನೆ.

ಈ ಘಟನೆಯಲ್ಲಿ ಬಾಲಕ ಅಖಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂಬುವುದನ್ನು ಗಮನಿಸಿದ ಈತ ತನ್ನ ಜೆಸಿಬಿಯ ಕೊಕ್ಕಿನಲ್ಲಿ ಬಾಲಕನನ್ನು ಬದಿಗೆ ಸರಿದು ತಾನು ಕೆಲಸ ಮಾಡಬೇಕಾದ ಸ್ಥಳಕ್ಕೆ ಸೇರಿದ್ದಾನೆ. ತಾನು ಕೆಲಸ ಮಾಡಬೇಕಾದ ಮನೆಯಲ್ಲಿ ಜೆಸಿಬಿ ನಿಲ್ಲಿಸಿ ಇನ್ನೊಬ್ಬ ಡ್ರೈವರ್ ಬರುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.

ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು..!
ಈ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದಿದೆ. ಗ್ರಾಮಸ್ಥರು ಒಟ್ಟು ಸೇರಿ ಈ ನರಪಾತಕ ಸಾದೀಕ್ ಬಾಷಾನನ್ನು ಹಿಗ್ಗಾಮುಗ್ಗ ಥಳಿಸಿ ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ. ನೀಚ ಕೃತ್ಯ ಎಸಗಿದ ಈ ನರಪಾತಕ ಕ್ರಿಮಿನಲ್ ಆರೋಪಿಯನ್ನು ಹೀಗೆಯೇ ಬಿಟ್ಟರೆ ಆತನ ಛಾಳಿ ಬುದ್ದಿಯನ್ನು ತೋರಿಸುವುದಂತೂ ಖಂಡಿತ. ಹೀಗಾಗಿ ಇಂತಹ ಆರೋಪಿಯನ್ನು ಕಾನೂನಿನ ಅನ್ವಯ ಸರಿಯಾದ ಶಿಕ್ಷೆಯಾಗಬೇಕು ಎಂಬುವುದು ಗದಗದ ಜನತೆ ಹಾಗೂ ದಕ್ಷಣ ಕನ್ನಡ ಜನತೆಯ ಆಕ್ರೋಶವಾಗಿದೆ.

- Advertisement -

Related news

error: Content is protected !!