Saturday, April 20, 2024
spot_imgspot_img
spot_imgspot_img

ವಿಟ್ಲ: ಕಬಕ-ವಿಟ್ಲ ರಸ್ತೆ ಅಗಲೀಕರಣ ಮತ್ತು ಮರು ಡಾಮರೀಕರಣ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಕಬಕ-ವಿಟ್ಲ ರಸ್ತೆ ಅಗಲೀಕರಣ ಮರು ಡಾಮರೀಕರಣ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮವು ನ.12ರಂದು ಬೆಳಿಗ್ಗೆ 9.30ಕ್ಕೆ ಕಬಕ ಜಂಕ್ಷನ್‌ನಲ್ಲಿ ನಡೆಯಿತು.

ಸುಮಾರು 13 ಕೋಟಿರೂ. ವೆಚ್ಚದಲ್ಲಿ ಕಬಕ-ವಿಟ್ಲ ರಸ್ತೆ ಅಗಲೀಕರಣ ಮರುಡಾಮರೀಕರಣ ಕಾಮಗಾರಿಯು ನಡೆಯಲಿದ್ದು, ಈವರೆಗೆ ಐದೂವರೆ ಮೀಟರ್ ಇದ್ದ ರಸ್ತೆ ಕಾಮಗಾರಿಯ ನಂತರ ಏಳೂವರೆ ಮೀಟರ್ ನಷ್ಟು ಅಗಲೀಕರಣವಾಗಲಿದೆ.

ಕಬಕ-ವಿಟ್ಲ ಸಂಪರ್ಕಿಸುವ ರಸ್ತೆ ಇದಾಗಿದ್ದು, ಎರಡು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ರಸ್ತೆಯಾಗಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 7 ಕಿ.ಮೀ ಮತ್ತು ಉಳಿದ ಭಾಗಗಳೆಲ್ಲಾ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ್ದಾಗಿದೆ.

ಈ ರಸ್ತೆಗೆ ಡಾಮರೀಕರಣ ಮಾಡಬೇಕೆಂದು ಜನರ ಬಹುದಿನದ ಬೇಡಿಕೆಯಾಗಿದ್ದು, ಜನರ ಬೇಡಿಕೆಗೆ ಸ್ಪಂದಿಸಿದ ಶಾಸಕ ಸಂಜೀವ ಮಠಂದೂರು ಇವರಿಗೆ ಜನರು ಕೃತಜ್ಞತೆ ತಿಳಿಸಿದ್ದಾರೆ.

ಈ ರಸ್ತೆಯ ಶಿಲಾನ್ಯಾಸ ಕಾರ್ಯಕ್ರಮ ನ.12ರಂದು ಬೆಳಗ್ಗೆ ಕಬಕ ಜಂಕ್ಷನ್‌ನಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ಕಾರ್ಯಕ್ರಮ ನೇರವೇರಿಸಿದ್ದು, ಹಲವು ಗಣ್ಯರು ಆಗಮಿಸಿದ್ದರು.

vtv vitla
- Advertisement -

Related news

error: Content is protected !!