Thursday, April 25, 2024
spot_imgspot_img
spot_imgspot_img

ವಿಟ್ಲ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿಶಾ .ಕೆ.ಪೂಜಾರಿ

- Advertisement -G L Acharya panikkar
- Advertisement -

ವಿಟ್ಲ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಸೃಷ್ಟಿಶಕ್ತಿ ಸಂಸ್ಥೆ ಕೊಡಮಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ದಿಶಾ .ಕೆ.ಪೂಜಾರಿ ಪುರಸ್ಕೃತರಾಗಿದ್ದಾರೆ. ಬರಿಮಾರು ಗ್ರಾಮ ಕಾಗೆಕಾನದ ಕೇಶವ ಪೂಜಾರಿ ಹಾಗೂ ರಾಜೀವಿ ಇವರ ಪುತ್ರಿಯಾಗಿರುವ ದಿಶಾ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ.

ಚಿಕ್ಕ ವಯಸ್ಸಿನಲ್ಲೇ ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಈಕೆ, ಈಗಾಗಲೇ‌ ಐನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದು,ಯಕ್ಷಗಾನ, ನಾಟಕ, ಚಿತ್ರಕಲೆ,ಯೋಗ,ಭರತನಾಟ್ಯ, ಸಂಗೀತ ಮತ್ತು ನಿರೂಪಣೆಯಲ್ಲೂ ಸೈ ಎನ್ನಿಸಿದ ಬಹುಮುಖ ಪ್ರತಿಭೆ.

ಹತ್ತು-ಹಲವು ಸಂಘ ಸಂಸ್ಥೆಗಳ ಸನ್ಮಾನಗಳು ಇವರ ಮಡಿಲಿಗೆ ಸೇರಿದೆ. ಸ್ಥಳೀಯ ಟಿ.ವಿ ಚಾನೆಲ್ ಗಳು ನಡೆಸಿದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ‘ರಾರಾಸಂ ಫೌಂಡೇಶನ್ ರವರು ನಡೆಸಿದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ ಯುವವಾಹಿನಿ ನಡೆಸುವ ‘ಡೆನ್ನಾನ ಡೆನ್ನಾನ’ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಜನರ ಮನಸ್ಸನ್ನು ಗೆದ್ದ ಹೆಮ್ಮೆ ಇವರದು.


ಭೋದಿ ಮೀಡಿಯಾ ಆಯೋಜಿಸಿದ “ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್” ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಗಳಿಸಿದ್ದಾರೆ. “ಡ್ಯಾನ್ಸ್ ಮಾಡಿ ಬಹುಮಾನ ಗೆಲ್ಲಿರಿ” ಎನ್ನುವ ವಿಭಿನ್ನ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ ಕೀರ್ತಿ ಈ ಬಾಲ ಪ್ರತಿಭೆಯದ್ದು.ರಾಜ್ಯ ಮಟ್ಟದ ರಾಕ್ ಬ್ಲಾಸ್ಟ್ ಡಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಜ್ಯ ಮಟ್ಟದ ಕಣ್ಣೂರು ಬಾಯ್ಸ್ ಡಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಲವು ಶಾರ್ಟ್ ಫಿಲ್ಮ್ ಮತ್ತು ಆಲ್ಬಮ್ ಸಾಂಗ್ ಗಳಲ್ಲಿ ಅಭಿನಯಿಸಿ ನಟನೆಯಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.ಅಷ್ಟೇ ಅಲ್ಲದೆ ಕನ್ನಡ ಚಲನಚಿತ್ರದಲ್ಲಿ ಬಾಲ ನಟಿಯಾಗಿ ಬಣ್ಣ ಹಚ್ಚಿ ನಟನೆ ಮಾಡಿರುವುದು ಇವರ ಸಾಧನೆಯ ದೊಡ್ಡ ಹೆಜ್ಜೆ ಆಗಿದೆ. ದಿಶಾ‌ ನಟಿಸಿರುವ ಚಲನಚಿತ್ರವು ಶೀಘ್ರದಲ್ಲಿಯೇ ಬಿಡುಗಡೆಗೊಳ್ಳಲಿದೆ.

astr
- Advertisement -

Related news

error: Content is protected !!