
ವಿಟ್ಲ: ಕುಲಾಲ ಸಂಘದ ವಾರ್ಷಿಕ ಮಹಾಸಭೆಯು ಅ.10 ರಂದು ಸಂಘದ ಅಧ್ಯಕ್ಷ ಬಿ. ಕೆ.ಬಾಬುರವರ ಅದ್ಯಕ್ಷತೆಯಲ್ಲಿ ನಡೆಯಿತು.


2020-21ರ ಸಾಲಿನ ಲೆಕ್ಕ ಪತ್ರ ಮಂಡಿಸಲಾಯಿತು ಮುಂದಿನ ವರ್ಷಗಳಲ್ಲಿ ನಡೆಯಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಸಭಾಭವನ ಕಟ್ಟಡದ ಪೂರ್ಣಗೊಳಿಸುವರೇ ನಡೆಸಬೇಕಾದ ಸಂಗ್ರಹಗಳ ಬಗ್ಗೆ ಚರ್ಚಿಸಲಾಯಿತು. 2021ನೇ ಸಾಲಿನ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆಗೊಳಿಸಲಾಯಿತು. ನವರಾತ್ರಿಯ ವಿಶೇಷ ಭಜನಾ ಕಾರ್ಯಕ್ರಮವನ್ನು ಕುಲಾಲ ಸಮಾಜದ ಬಾಂಧವರು ನೆರವೇರಿಸಿಕೊಟ್ಟರು.


ಗೌರವಧ್ಯಕ್ಷ ವೀರಪ್ಪಮೂಲ್ಯ ಪುಣಚ ಪ್ರಾಸ್ತವಿಕ ಮಾತಾನ್ನಾಡಿದರು. ಸಂಘದ ಕೋಶಾಧಿಕಾರಿ ಅಚ್ಚುತ ಕಟ್ಟೆ ಲೆಕ್ಕಪತ್ರ ನೀಡಿದರು, ಅರುಣಕುಮಾರ್ ಮತ್ತು ಮಹಿಳಾ ಘಟಕದ ಉಷಾ ವರದಿ ವಾಚಿಸಿದರು. ಕಾರ್ಯದರ್ಶಿ ರಮೇಶಕುಲಾಲ್, ಮಹಿಳಾಘಟಕದ ಅಧ್ಯಕ್ಷೆ ಸುಚಿತ್ರ ರಮಾನಾಥ್,ಕಟ್ಟಡ ಸಮಿತಿ ಅಧ್ಯಕ್ಷ ರಮಾನಾಥ್ ವಿಟ್ಲ ಉಪಸ್ಥಿತರಿದ್ದರು. ಸ್ವಜಾತಿ ಬಂಧು ಭಗಿಣಿಯರು ಸಲಹೆ ನೀಡಿದರು.

ಉಪಾಧ್ಯಕ್ಷ ರಾಧಾಕೃಷ್ಣ ಎರುಂಬು ಸ್ವಾಗತಿಸಿ ನಿರೂಪಿಸಿದರು. ಸುರೇಶ ವಿಟ್ಲ ವಂದಿಸಿದರು.











