Wednesday, April 24, 2024
spot_imgspot_img
spot_imgspot_img

ವಿಟ್ಲ: ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಪರಿಮಳ ಹೊಟೇಲ್ ಮಾಲಕ, ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲು!

- Advertisement -G L Acharya panikkar
- Advertisement -

ವಿಟ್ಲ: ಅರಮನೆ ರಸ್ತೆಯ ಪರಿಮಳ ಹೋಟೇಲ್ ನಲ್ಲಿ ಕರ್ನಾಟಕ ಸರಕಾರದ ಕೋವಿಡ್-19 ನಿಯಂತ್ರಣ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಐದು ಮಂದಿಯ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿದ ಮಾರ್ಗ ಸೂಚಿಯ ಪ್ರಕಾರ ಉಪಹಾರ ಗೃಹಗಳಿಂದ ಕೇವಲ ಆಹಾರಗಳನ್ನು ಗಿರಾಕಿಗಳಿಗೆ ಪಾರ್ಸೇಲ್ ನೀಡಲು ಮಾತ್ರ ಅವಕಾಶವಿದೆ.

ಆದರೆ ವಿಟ್ಲ ಕಾಸರಗೋಡು ರಸ್ತೆಯ ಪರಿಮಳ ಉಪಹಾರ ಗೃಹದಲ್ಲಿ ಮಾಸ್ಕ್ ಧರಿಸದೆ ಇದ್ದ ಐದು ಮಂದಿಗೆ ಏ.22ರಂದು ರಾತ್ರಿ 10ಗಂಟೆಗೆ ಹೋಟೇಲ್ ಮಾಲಕ ಹಾಗೂ ವೈಟರ್ ಆಸನದ ಮುಂಭಾಗದ ಮೇಜುಗಳಿಗೇ ಆಹಾರ ಸರಬರಾಜು ಮಾಡಲಾಗಿತ್ತು.

ಕರ್ನಾಟಕ ಸರಕಾರದ ಕೋವಿಡ್-19 ನಿಯಂತ್ರಣ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸೋಂಕು ಹರಡುವ ಸಂಭವವಿರುವ ನಿರ್ಲಕ್ಷ ಕೃತ್ಯ ಹಾಗೂ ದ್ವೇಷಪೂರ್ವಕ ಕೃತ್ಯ ನಡೆಸಿದ ಬಗ್ಗೆ ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ಅವರು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!