Monday, May 6, 2024
spot_imgspot_img
spot_imgspot_img

ವಿಟ್ಲ: ಕೋವಿಡ್ ವ್ಯಾಕ್ಸಿನ್ ಶಿಬಿರದಲ್ಲಿ ಪಂ.ಸದಸ್ಯರುಗಳ ಹಸ್ತಕ್ಷೇಪ ಆರೋಪ; ಜಿಲ್ಲಾಧಿಕಾರಿಗೆ ದೂರು!

- Advertisement -G L Acharya panikkar
- Advertisement -

ವಿಟ್ಲ: ವಿಟ್ಲಪಡ್ನೂರು ಪಂ.ಕಛೇರಿಯಲ್ಲಿ ಆ.02ರಂದು ವ್ಯಾಕ್ಸಿನ್ ಶಿಬಿರ ನಡೆಯಲಿರುವ ಬಗ್ಗೆ ಆರೋಗ್ಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಲಾಡ್ಜ್ ನಲ್ಲಿ ಕೂಡಿ ಹಾಕಿ ಬಾಲಕನಿಗೆ ಲೈಂಗಿಕ ದೌರ್ಜನ್ಯ; ಮದರಸಾ ಶಿಕ್ಷಕನಿಗೆ 11 ವರ್ಷ ಜೈಲು ಶಿಕ್ಷೆ

ಇದರಂತೆ ಬೆಳಗ್ಗೆ 8.45ಕ್ಕೆ ನೂರಾರು ಜನರು ಕೇಂದ್ರದಲ್ಲಿ ಸೇರಿದ್ದು ಆರೋಗ್ಯ ಸಿಬ್ಬಂದಿಗಳ ಆಗಮನಕ್ಕಾಗಿ ಕಾದಿದ್ದರು. 9:15ರ ಬಳಿಕ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ವ್ಯಾಕ್ಸಿನ್ ಪಡೆಯಲು ಕಾದು ನಿಂತಿದ್ದ ಗ್ರಾಮಸ್ಥರಿಗೆ ಟೋಕನ್ ನೀಡದೇ, ಅಷ್ಟರಲ್ಲಾಗಲೇ 120 ಟೋಕನುಗಳು ಪಂಚಾಯತ್ ಸದಸ್ಯರುಗಳ ಕೈವಶವಾಗಿದೆ.

ತಮ್ಮ ಸಹವರ್ತಿಗಳಿಗೆ ಬೇಕಾಗುವಷ್ಟು ಟೋಕನುಗಳನ್ನು ಆಯಾಯಾ ಪಂ.ಸದಸ್ಯರುಗಳು ಕೈವಶ ಮಾಡಿಕೊಂಡಿದ್ದಾರೆ. ಪಂ.ಸದಸ್ಯರುಗಳ ಮೂಲಕವೇ ವ್ಯಾಕ್ಸಿನ್ ಪಡೆಯಬೇಕೋ ಅಥವಾ ಆರೋಗ್ಯ ಸಿಬ್ಬಂದಿಗಳಿಂದ ನೇರವಾಗಿ ಪಡೆಯಬೇಕೋ ಎಂಬುದು ಉತ್ತರಸಿಗದ ಪ್ರಶ್ನೆಯಾಗಿದೆ.

ಆರೋಗ್ಯ ಇಲಾಖೆಯು ನಿಷ್ಪಕ್ಷಪಾತವಾಗಿ ನೀಡಬೇಕಾಗಿದ್ದ ವ್ಯಾಕ್ಸಿನುಗಳಲ್ಲೂ ಪಂ.ಸದಸ್ಯರುಗಳು ಹಸ್ತಕ್ಷೇಪ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ನ್ಯಾಯನೀಡಬೇಕೆಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!