Thursday, June 18, 2026
spot_imgspot_img
spot_imgspot_img

ವಿಟ್ಲ: ಗಡಿ ಪ್ರದೇಶದಲ್ಲಿ ಹೆಚ್ಚಿದ ವಾಹನ ತಪಾಸಣೆ; ಖಾಕಿ ಹದ್ದಿನ ಕಣ್ಣು

- Advertisement -
- Advertisement -
vtv vitla

ವಿಟ್ಲ: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರುರವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದ ಹಿನ್ನಲೆ ನಡೆದ ಕೂಡಲೇ ಕೇರಳ ಕರ್ನಾಟಕ ಗಡಿ ಪ್ರದೇಶಗಳಾದ ಸಾರಡ್ಕ, ಕನ್ಯಾನ, ಸಾಲೆತ್ತೂರು, ಚೆಕ್‌ಪೋಸ್ಟ್‌ಗಳಲ್ಲಿ ವಿಟ್ಲ ಠಾಣಾ ಇನ್‌ಸ್ಪೆಕ್ಟರ್ ಹೆಚ್.ಇ ನಾಗರಾಜ್ ನೇತೃತ್ವದ ಪೊಲೀಸರಿಂದ ವಾಹನ ತಪಾಸಣೆ ಬಿಗುಗೊಳಿಸಲಾಗಿದೆ.

ಕರ್ನಾಟಕಕ್ಕೆ ಆಗಮಿಸುವ ಹಾಗೂ ಕೇರಳಕ್ಕೆ ತೆರಳುವ ವಾಹನಗಳ ಬಗ್ಗೆ ತೀವ್ರ ನಿಗಾ ಇರಿಸಲಾಗುತ್ತಿದೆ. ಮಾತ್ರವಲ್ಲದೆ ಇಡೀ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

- Advertisement -

Related news

error: Content is protected !!