Sunday, May 5, 2024
spot_imgspot_img
spot_imgspot_img

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿ. ಇದರ 66 ನೇ ವರ್ಷದ ವಾರ್ಷಿಕ ವರದಿ 2020-21

- Advertisement -G L Acharya panikkar
- Advertisement -
vtv vitla

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ಇದರ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.21ರ ಮಂಗಳವಾರ ವಿಟ್ಲದ ಶಾಂತಿನಗರದಲ್ಲಿರುವ ಅಕ್ಷಯ ಸಮುದಾಯ ಭವನದಲ್ಲಿ ನಡೆಯಿತು. ಈ ಸಭೆಯಲ್ಲಿ 66ನೇ ವರ್ಷದ ವಾರ್ಷಿಕ ವರದಿ ಮಂಡಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ನಡೆದಿದೆ.

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ಇದರ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್, ಉಪಾಧ್ಯಕ್ಷ ಮೋಹನ್ ಕೆ.ಎಸ್, ನಿರ್ದೇಶಕರುಗಳಾದ ಹರೀಶ್ ನಾಯಕ್, ಮನೋರಂಜನ್ ಕೆ.ಆರ್, ವಿಶ್ವನಾಥ ಎಂ, ಕೃಷ್ಣ ಕೆ, ಉದಯಕಮಾರ್ ಎ, ಬಾಲಕೃಷ್ಣ ಪಿ.ಎಸ್, ದಿವಾಕರ ವಿ, ದಯಾನಂದ ಆಳ್ವ ಕೆ, ಸುಂದರ ಡಿ, ಗೋವರ್ಧನ ಕುಮಾರ್ ಐ, ಶುಭಲಕ್ಷ್ಮಿ, ಜಯಂತಿ ಹೆಚ್ ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳೀ ಶ್ಯಾಮ್ ಕೆ, ಕಾನೂನು ಸಲಹೆಗಾರರಾದ ಪುಂಡಿಕಾೈ ನಾರಾಯಣ ಭಟ್, ಎಂ ಗೋಪಾಲಕೃಷ್ಣ ಸೇರಿದಂತೆ ಮೊದಲಾದವರು ಜೊತೆಗಿದ್ದರು.

vtv vitla

ಈ ಸಭೆಯಲ್ಲಿ 2020-21 ನೇ ಸಾಲಿನ ಆಡಳಿತ ಮಂಡಳಿ ವರದಿ ಮಂಜೂರಾತಿ, ಲೆಕ್ಕ ಪರಿಶೋಧನಾ ವರದಿ ಮಂಜೂರು, ನಿವ್ವಳ ಲಾಭ ವಿಂಗಡನೆ, ಆಯ-ವ್ಯಯ ಗಿಂತ ಜಾಸ್ತಿ ಖರ್ಚಾದ ಐಟಂಗಳ ಮಂಜೂರಾತಿ, 2021-22ನೇ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿಯ ಮಂಜೂರಾತಿ, 2021-22ನೇ ವರ್ಷದ ಬ್ಯಾಂಕಿನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರನ್ನು ನೇಮಿಸುವ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದವು.

2019-2020 ನೇ ಸಾಲಿನಲ್ಲಿ 474.23 ಕೋಟಿ ರೂಪಾಯಿಗಳ ವ್ಯವಹಾರವನ್ನು ನಡೆಸಿ ರೂಪಾಯಿ 1,55,54,727,28 ಲಾಭವನ್ನು ಗಳಿಸಿದ್ದು 2020 2021 ನೇ ಸಾಲಿನಲ್ಲಿ 531.86 ಕೋಟಿ ರೂಪಾಯಿಗಳ ವ್ಯವಹಾರವನ್ನು ದಾಖಲಿಸಿ ರೂಪಾಯಿ 2,15,90,835.01 ಲಾಭವನ್ನು ಗಳಿಸಿದೆ. ಆಡಿಟ್ ವರ್ಗಿಕರಣದಲ್ಲಿ ಕಳೆದ ಹಲವು ವರ್ಷಗಳಿಂದ ಸತತವಾಗಿ ‘ಎ’ ತರಗತಿಯಲ್ಲಿ ಮುನ್ನಡೆಯುತ್ತಿದೆ.

vtv vitla
vtv vitla
- Advertisement -

Related news

error: Content is protected !!