Friday, April 26, 2024
spot_imgspot_img
spot_imgspot_img

ವಿಟ್ಲ: ಜೇಸಿಐ ವತಿಯಿಂದ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನ; ಟಾಪ್ ಟು ಟಾಪ್‌ ಪ್ರಶಸ್ತಿ ಗಿಟ್ಟಿಸಿಕೊಂಡ ಜೇಸಿಐ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಜೇಸಿಐ ವತಿಯಿಂದ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನ ವಿಟ್ಲದ ಜೆಎಲ್ ಅಡಿಟೋರಿಯಂನಲ್ಲಿ ನಡೆಯಿತು.

ಜೇಸಿಐ ವಲಯ ನಿರ್ದೇಶಕ ಮರಿಯಪ್ಪ ಅವರು ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ನಡೆಸಿಕೊಟ್ಟರು. ರಾಷ್ಟ್ರೀಯ ಉಪಾಧ್ಯಕ್ಷ ಪೊನ್ನುರಾಜ್, ವಲಯಾಧ್ಯಕ್ಷ ರಾಯನ್ ಉದಯ ಕ್ರಾಸ್ತ ಅವರು ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಲಾಂಛನ ಅನಾವರಣಗೊಳಿಸಿ,ಕ್ರೀಡಾಪಟು ನಿತಿನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ, ಕಿರಿಯ ಜೇಸಿಗಳ ಸಮಾಗಮ, ಝಗಮಗಿಸಿಸುವ ಸಭಾ ವೇದಿಕೆ, ಆಕರ್ಷಕ ಸಭಾಂಗಣ ರಚನೆ ಮಾಡಲಾಗಿತ್ತು. ಶಿವಂ ಡ್ಯಾನ್ಸ್ ತಂಡದಿಂದ ಡ್ಯಾನ್ಸ್, ಗಾಯನ, ಹಾಗೂ ಮಿಮಿಕ್ರಿ, ಶುಚಿರುಚಿಯಾದ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಭೋಜನ, ಅತ್ಯಾಕರ್ಷಕ ಸೆಲ್ಸಿ ಬೂತ್, ಡಿ.ಜೆ ಹಾಗೂ ಮನೋರಂಜನಾ ಆಟಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಪೂರ್ವವಲಯಾಧ್ಯಕ್ಷ ಸೌಜನ್ಯ, ಹೆಗಡೆ, ವಲಯ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ, ವಿಟ್ಲ ಜೇಸಿಐ ಅಧ್ಯಕ್ಷ ಚಂದ್ರಹಾಸ ಕೊಪ್ಪಳ, ಕಾರ್ಯದರ್ಶಿ ನವೀನ್ ಚಂದ್ರ ವಿ.ಆರ್, ಕಾರ್ಯಕ್ರಮ ಸಂಯೋಜಕ ಕ್ಲಿಫರ್ಡ್ ವೇಗಸ್, ಸೌಮ್ಯ ಚಂದ್ರಹಾಸ, ವಿವಿಧ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅನಿಲ್ ವಡಗೇರಿ, ಹೇಮಲತಾ ಜೈಕಿಶನ್, ಮೋಹನ್ ಮೈರ, ಬಾಬು ಕೆ.ವಿ, ಪರಮೇಶ್ವರ್, ರಾಜು, ಖುಷಿ ರೈ ಸಂದೀಪ್ ಅವರು ವಿವಿಧ ಜವಾಬ್ದಾರಿ ನಿರ್ವಹಿಸಿದರು.

ಜೇಸಿಐ ವಿಟ್ಲ ಘಟಕವು ಚಾಂಪಿಯನ್ ಪ್ರಶಸ್ತಿಗೆ ಭಾಜನವಾಗಿದೆ. ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ವಲಯದಲ್ಲೇ ಟಾಪ್ ಟು ಟಾಪ್ ಘಟಕವಾಗಿ ಮೂಡಿಬಂದಿದೆ. ಈ ಪ್ರಶಸ್ತಿಗಳನ್ನು ಸಮ್ಮೇಳನದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆ ಸಿ ಪೊನ್ನರಾಜ್, ವಲಯ ಹದಿನೈದರ ವಲಯಾಧ್ಯಕ್ಷರಾದ ಜೆಸಿ ರಾಯನ್ ಉದಯ ಕ್ರಾಸ್ತಾ ನಿಕಟಪೂರ್ವ ವಲಯಾಧ್ಯಕ್ಷ ಸೌಜನ್ಯ ಹೆಗ್ಡೆ, ವಲಯ ಉಪಾಧ್ಯಕ್ಷರಾದ ಜೇಸಿ ಪ್ರಶಾಂತ್ ಲಾಯಿಲ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕರಾದ ಮರಿಯಪ್ಪ ವಿತರಿಸಿದರು.

ಜೇಸಿಐ ವಿಟ್ಲ ಘಟಕದ ಅಧ್ಯಕ್ಷ ಜೇಸಿ ಚಂದ್ರಹಾಸ ಕೊಪ್ಪಳ ಹಾಗೂ ಜೇಸಿಐ ವಿಟ್ಲ ಘಟಕದ ಪೂರ್ಣ ತಂಡವು ಪುರಸ್ಕಾರವನ್ನು ಪಡೆದುಕೊಂಡಿತು.

- Advertisement -

Related news

error: Content is protected !!