Wednesday, April 24, 2024
spot_imgspot_img
spot_imgspot_img

ವಿಟ್ಲ: (ಜ.13-27) ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ ಮತ್ತು ಕಂಪಾನಿಯೋ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

- Advertisement -G L Acharya panikkar
- Advertisement -
vtv vitla

ವಿಟ್ಲ: ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ ಮತ್ತು ಕಂಪಾನಿಯೋ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವು ಜನವರಿ 13 ಶುಕ್ರವಾರದಿಂದ ಜ. 27 ಶುಕ್ರವಾರ ತನಕ ಚಂದಳಿಕೆ ಯುವಕೇಸರಿ ಕಾರ್ಯಾಲಯದಲ್ಲಿ ನಡೆಯಲಿದೆ.

ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ವಿಟ್ಲ ಪೊಲೀಸ್ ಠಾಣೆಯ ಉಪನಿರಿಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಲ.ಎನ್ ದೇಜಪ್ಪ ಪೂಜಾರಿ ನಿಡ್ಯ ಉದ್ಯಮಿಗಳು ವಿಟ್ಲ ಚಂದಳಿಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಂದಳಿಕೆ ಯುವಕೇಸರಿ ಅಬೀರಿ-ಅತಿಕಾರಬೈಲು (ರಿ) ಗೌರವಾಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ರಕ್ಷಿತಾ ಸನತ್ ಸಾಲಿಯಾನ್ ಚಂದಳಿಕೆ, ಹರೀಶ್ ಸಿ.ಎಚ್ ವಿಟ್ಲ, ಚಂದಳಿಕೆ ಯುವಕೇಸರಿ ಅಬೀರಿ-ಅತಿಕಾರಬೈಲು (ರಿ) ಸ್ಥಾಪಕ ಅಧ್ಯಕ್ಷ ವಿಠಲ ಪೂಜಾರಿ ಅತಿಕಾರಬೈಲು, ಸಂಚಾಲಕ ದಿವಾಕರ ಶೆಟ್ಟಿ ಅಬೀರಿ, ಪ್ರಧಾನ ಸಂಚಾಲಕರು ಸುಶಾಂತ್ ಸಾಲಿಯಾನ್ ಚಂದಳಿಕೆ ಭಾಗವಹಿಸಲಿದ್ದಾರೆ. ಶಿಬಿರದ ಮಾಹಿತಿಯನ್ನು ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಪುತ್ತೂರು ಕಲ್ಲಾರೆ ಇದರ ಸಿಬ್ಬಂದಿಯಾದ ಕೆ ಪ್ರಭಾಕರ್ ಸಾಲಿಯಾನ್ ಇವರು ನೀಡಲಿದ್ದಾರೆ.

ಈ ಉಚಿತ ಶಿಬಿರವು ಈ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು, ಮಧುಮೇಹ, ಅಧಿಕ ರಕ್ತದ ಒತ್ತಡ, ಸಂಧಿವಾತ, ವೆರಿಕೋಸ್ ವೇನ್, ಸ್ನಾಯು ಸೆಳೆತ, ಊತ, ಪಾರ್ಕಿನ್ ಸನ್, ಸಯಾಟಿಕಾ, ಸರ್ವಿಕಲ್ ಸ್ಪಾಂಡಿಲೈಟಿಸ್, ನಿದ್ರಾಹೀನತೆ, ಥೈರಾಯಿಡ್, ಬೆನ್ನುನೋವು, ಥೈರಾಯಿಡ್, ಪಾರ್ಶ್ವವಾಯು, ಬೊಜ್ಜುನಿವಾರಣೆ, ಬಿ. ಪಿ ಶುಗರ್ ಹಾಗೂ ಇನ್ನಿತರ ಎಲ್ಲಾ ಕಾಯಿಲೆಗಳಿಗೆ ಪರಿಹಾರ.

ಹೆಚ್ಚಿನ ಮಾಹಿತಿಗಾಗಿ ಯುವಕೇಸರಿ ಸದಸ್ಯ ಪ್ರಶಾಂತ್ ಪೂಜಾರಿ ನೀರ್ಕಜೆ ಇವರನ್ನು ಸಂಪರ್ಕಿಸಿ 9731530501

ಥೆರಪಿ ಸಮಯ ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 4.30 ರವರೆಗೆ ನಡೆಯಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಮತ್ತು ಶಿಬಿರಕ್ಕೆ ಸೇರುವ ಸಾರ್ವಜನಿಕರು ಉದ್ಘಾಟನಾ ದಿನದಂದು ಬೆಳಿಗ್ಗೆ 9 ಕ್ಕೆ ಹೆಸರು ನೋಂದಾವಣೆ ಮಾಡಲು ಹಾಜರಿರಬೇಕೆಂದು ಯುವಕೇಸರಿಯ ಅಧ್ಯಕ್ಷರಾದ ಗಣೇಶ್ ಪೂಜಾರಿ ಪಟ್ಲ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!