Wednesday, July 22, 2026
spot_imgspot_img
spot_imgspot_img

ವಿಟ್ಲ: ನೂರು ಕೋಟಿಗೂ ಅಧಿಕ ಲಸಿಕೆ ಸಾಧನೆ; ಬಿಜೆಪಿ ವತಿಯಿಂದ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಬಂಟ್ವಾಳ ಮತ್ತು ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ವತಿಯಿಂದ, ದೇಶದಲ್ಲಿ ನೂರು ಕೋಟಿಗೂ ಅಧಿಕ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡುವುದರ ಮೂಲಕ ಅಪ್ರತಿಮ ಸಾಧನೆ ಮಾಡಿದ ಪ್ರಧಾನಿ ಸರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದ ಅಂಗವಾಗಿ ವಿಟ್ಲ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ವೇದಾವತಿ ಮತ್ತು ಅವರ ತಂಡಕ್ಕೆ ಗೌರವಾರ್ಪಣೆ ಕಾರ್ಯಕ್ರಮವು ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ನಡೆಯಿತು.

ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ವಿಟ್ಲ ಮಹಾಶಕ್ತಿ ಕೇಂದ್ರದ ಪ್ರಮುಖರಾದ ವಿ ರಾಮದಾಸ ಶೆಣೈ, ಮೋಹನದಾಶ ಉಕ್ಕುಡ, ಕರುಣಾಕರ ನಾಯ್ತೊಟ್ಟು, ಜಗದೀಶ ಪಾಣೆಮಜಲು.

ಹರೀಶ ಪೂಜಾರಿ ವಿಟ್ಲ, ಬಂಟ್ವಾಳ ಕ್ಷೇತ್ರದ ಮಾಧ್ಯಮ ಪ್ರಮುಖ್ ದೇವಿಪ್ರಸಾದ್ ಶೆಟ್ಟಿ, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ವೀರಕಂಭ, ವಿಟ್ಲ ಪಡ್ನೂರು ಶಕ್ತಿಕೇಂದ್ರದ ಪ್ರಮುಖ ಅರವಿಂದ ರೈ, ಬೋಳಂತೂರು ಗ್ರಾಮದ ಜಯರಾಮ್ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!