Sunday, June 14, 2026
spot_imgspot_img
spot_imgspot_img

ವಿಟ್ಲ: ನೆಲ್ಲಿಗುಡ್ಡೆ ಮಸೀದಿ ಅಧ್ಯಕ್ಷರಾಗಿ ಪಿ.ಅಬೂಬಕ್ಕರ್ ನೆಲ್ಲಿಗುಡ್ಡೆ

- Advertisement -
- Advertisement -

ವಿಟ್ಲ : ನೆಲ್ಲಿಗುಡ್ಡೆ ನೂರುಲ್ ಹುದಾ ಮದ್ರಸ ಮತ್ತು ಮಸ್ಜಿದ್ ಕಮಿಟಿ ಇದರ ನೂತನ ಅಧ್ಯಕ್ಷರಾಗಿ ಪಿ.ಅಬೂಬಕ್ಕರ್ ನೆಲ್ಲಿಗುಡ್ಡೆ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.

ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ನೆಕ್ಕರೆಕಾಡು ಅವರು ಅಧ್ಯಕ್ಷತೆಯಲ್ಲಿ ನಡೆದ ಮಸೀದಿ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಹನೀಫ್ ಎನ್.ಕೆ.ಸ್ವಾಗತಿಸಿ ವರದಿ ವಾಚಿಸಿದರು, ಅಬೂಬಕ್ಕರ್ ನೆಲ್ಲಿಗುಡ್ಡೆ ಲೆಕ್ಕಪತ್ರ ಮಂಡಿಸಿದರು.

ಉಪಾಧ್ಯಕ್ಷರಾಗಿ ಶೇಖ್ ಶಬ್ಬೀರ್ ಸಾಹೇಬ್, ಪ್ರಧಾನ ಕಾರ್ಯದರ್ಶಿ ಯಾಗಿ ಮುಸ್ತಾಕ್ ಬೇಗ್, ಕಾರ್ಯದರ್ಶಿಗಳಾಗಿ ಹಂಝತ್ ವಿ.ಎಸ್, ಅಬ್ದುಲ್ ಖಾದರ್, ಕೋಶಾಧಿಕಾರಿಯಾಗಿ ಮುಹಮ್ಮದ್ ನೆಕ್ಕರೆ ಕಾಡು, ಅಬ್ದುಲ್ ರಹಿಮಾನ್ ಎಸ್.ಐ, ಅವರನ್ನು ಲೆಕ್ಕ ಪರಿಶೋಧಕರಾಗಿ ಆರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹನೀಫ್ ಎನ್.ಕೆ, ಇಬ್ರಾಹಿಂ ಕೊಪ್ಪಳ, ಅಬ್ದುಲ್ ರಹಿಮಾನ್, ಬಶೀರ್ ಮದನಿ, ಕುಂಞಿ ಮೋನು, ಅಬ್ದುಲ್ ರಹಿಮಾನ್ ಕೊಪ್ಪಳ, ಅಬ್ದುಲ್ಲಾ ಅಳಿಕೆ ಹಾಗೂ ರಫೀಕ್ ಇಸುಬು ಅವರನ್ನು ನೇಮಿಸಲಾಯಿತು.

- Advertisement -

Related news

error: Content is protected !!