Thursday, April 25, 2024
spot_imgspot_img
spot_imgspot_img

ವಿಟ್ಲ: “ನೇಗಿಲ ನೆನಪು” ಭತ್ತದ ಗದ್ದೆ ನಾಟಿ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: “ನೇಗಿಲ ನೆನಪು” ಎಂಬ ಭತ್ತದ ನಾಟಿ ಕಾರ್ಯಕ್ರಮ ಕುಳಗುತ್ತು ಕಂಬಳಗದ್ದೆಯಲ್ಲಿ ಆ.20ರಂದು ನಡೆಯಿತು. ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಇಡ್ಕಿದು ಗ್ರಾಮ ಪಂಚಾಯತು, ಶ್ರೀ ಷಣ್ಮಖ ಸುಬ್ರಹ್ಮಣ್ಯ ದೇವಸ್ಧಾನ ಕೋಲ್ಪೆ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಂಡಡ್ಕ, ಗ್ರಾಮ ವಿಕಾಸ ಸಮಿತಿ ಕುಳ, ಅಮೃತ ಸಿಂಚನ ರೈತ ಸೇವಾ ಒಕ್ಕೂಟ ಇವರ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮ ನೆರವೇರಿತು. ಈ ವೇಳೆ ಚಿದಾನಂದ ಪೆಲತಿಂಜ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಜಾ ರಾಧಾಕೃಷ್ಣ ಆಳ್ವ ವಹಿಸಿದ್ದರು. ಹಾಗೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಾಮರಸ್ಯ ಸಂಯೋಜಕ ರವೀಂದ್ರ.ಬಿ, ಬಂಟ್ವಾಳ ಕೃಷಿ ನಿರ್ದೇಶಕ ಚೆನ್ನಕೇಶವ ಮೂರ್ತಿ, ಕೃಷಿ ಅಧಿಕಾರಿ ಎಸ್. ಸರಿಕಾರ್, ಗಣೇಶ್.ಶೆಟ್ಟಿ ಕುಳಗುತ್ತು, ಸುಭಾಶ್ಚಂದ್ರ ಅಡ್ಯಂತಾಯ ಕುಳಗುತ್ತು ಉಪಸ್ಥಿತರಿದ್ದರು.

ಅಮೃತ ಸಿಂಚನ ರೈತ ಸೇವಾ ಒಕ್ಕೂಟದ ಅಧ್ಯಕ್ಷ ಪ್ರಕಾಶ್.ಕೆ.ಎಸ್, ಶ್ರೀ ಷಣ್ಮಖ ಸುಬ್ರಹ್ಮಣ್ಯ ದೇವಸ್ಧಾನ ಕೋಲ್ಪೆ ಇದರ ಅಧ್ಯಕ್ಷ ಸುರೇಶ್.ಕೆ.ಎಸ್ ಮುಕ್ಕುಡ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಂಡಡ್ಕ ಇದರ ಅಧ್ಯಕ್ಷ ದಯಾನಂದ ಉಜಿರೆಮಾರ್, ಇಡ್ಕಿದು ಗ್ರಾಮ ಪಂಚಾಯತ್ ಪಿ.ಡಿ.ಓ ಗೋಕುಲ್ ದಾಸ್ ಭಕ್ತ, ಇಡ್ಕಿದು ಸಹಕಾರಿ ಸಂಘ ಈಶ್ವರ್ ನಾೈಕ್ , ಬಿ.ಜೆ.ಪಿ ಪುಣಚ ಶಕ್ತಿಕೇಂದ್ರ ಅಧ್ಯಕ್ಷ ಹರಿಪ್ರಸಾದ್ ಯಾದವ್, ಬಿ.ಜೆ.ಪಿ ಗ್ರಾಮ ಮಂಡಲ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.

ಇಡ್ಕಿದು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಮ.ಭಟ್, ಯತೀಶ್ ಹಡೀಲು,ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಪದ್ಮನಾಭ ಕೊಂಕೋಡಿ,ಗುರಿಕಾರರಾದ ವೆಂಕಟೇಶ್ವರ ಕೆ.ಟಿ., ಪುತ್ತೂರು ಬಿಜೆಪಿ ಗ್ರಾಮ ಮಂಡಲದ ರಮೇಶ್ ಭಟ್ ಎಮ್ ಹೆಚ್, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಬರೆ, ಮೋಹಿನಿ ಪೆಲತಿಂಜ, ಲಲಿತಾ, ತಿಲಕರಾಜ್ ಶೆಟ್ಟಿ, ಸುಂದರ, ಕೇಶವ, ರಮೇಶ್ಚಂದ್ರ ಪಾಂಡೇಲು, ಮನೋಜ್ ಕಂಪ, ಮಹೇಶ್ ಕೊಂತ್ಯೊಟ್ಟು, ಕೃಷ್ಣಪ್ಪ ಅಡ್ಯಾಲು, ರಮೇಶ ಆಳ್ವ ಉರಿಮಜಲು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಚಿದಾನಂದ ಪಿ ಪೆಲತಿಂಜ ಅವರು ನಿರ್ವಹಿಸಿದರು. ರವೀಂದ್ರನಾಥ ಮೆಲಂಟರವರು ನಿರೂಪಿಸಿದರು.

- Advertisement -

Related news

error: Content is protected !!