Sunday, May 19, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: ಮಧ್ಯಾಹ್ನ 1 ಗಂಟೆಯ ವೇಳೆಗೆ 52.38% ಮತದಾನ

- Advertisement -G L Acharya panikkar
- Advertisement -

WATCH OUR LIVE BROADCAST

CLICK LINK BELOW ?? ?? ??

vtv vitla

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ಮಧ್ಯಾಹ್ನ ಗಂಟೆ 1ರ ಸುಮಾರಿಗೆ 18 ವಾರ್ಡ್’ಗಳಲ್ಲಿ ಈವರೆಗೆ 52.38% ಮತದಾನ ನಡೆದಿದೆ. 42 ಮಂದಿ ಅಭ್ಯರ್ಥಿಗಳು ಕಣದಲ್ಲಿರುವ ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎಸ್.ಡಿ.ಪಿ.ಐ. ಕೆಲ ವಾರ್ಡ್ ಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಿದೆ. ಇಬ್ಬರು ಪಕ್ಷೇತರರೂ ಕಣದಲ್ಲಿದ್ದಾರೆ.

vtv vitla

18 ವಾರ್ಡ್ಗಳಿಗೆ 7 ಮತದಾನ ಕೇಂದ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿ0ದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮೇಗಿನಪೇಟೆ ಶಾಲೆ, ಬೊಬ್ಬೆಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾದರಿ ಶಾಲೆ ವಿಟ್ಲ, ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ, ವಿಟ್ಲ ಪದವಿ ಪೂರ್ವ ಕಾಲೇಜು, ಒಕ್ಕೆತ್ತೂರು ಶಾಲೆ ನೆಲ್ಲಿಗುಡ್ಡೆ ಪ್ರೌಢ ಶಾಲೆಯಲ್ಲಿ ಮತದಾನ ನಡೆಯುತ್ತಿದೆ.

7180 ಮಂದಿ ಪುರುಷ ಮತದಾರರು, 7573 ಮಂದಿ ಮಹಿಳಾ ಮತದಾರರು ಸೇರಿದಂತೆ 14,753 ಮಂದಿ ಮತದಾರರಿದ್ದಾರೆ. 18 ವಾರ್ಡ್ನ ಮತಗಟ್ಟೆಯಲ್ಲಿ 4 ಅಧಿಕಾರಿಗಳು, ಓರ್ವ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಿಆರ್‌ಓ, ಎಪಿಆರ್‌ಓ ಹಾಗೂ ಪಿವಿ ಸಹಿತ ಒಟ್ಟು 88 ಮಂದಿ ಮತಗಟ್ಟೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಮಧ್ಯಾಹ್ನ ಗಂಟೆ 3ರ ಸುಮಾರಿಗೆ 62.77% ಮತದಾನ ನಡೆದಿದೆ.

suvarna gold
vtv vitla
vtv vitla
vtv vitla
vtv vitla
- Advertisement -

Related news

error: Content is protected !!