Friday, April 26, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: ಜಿದಾಜಿದ್ದಿನ ಕಣವಾಗಿರುವ ವಾರ್ಡ್ 11ರಲ್ಲಿ ತ್ರಿಕೋನ ಸ್ಪರ್ಧೆ; ಬಿಜೆಪಿಯಿಂದ ಅರುಣ್ ವಿಟ್ಲ, ಕಾಂಗ್ರೆಸ್’ನಿ0ದ ರಮಾನಾಥ ವಿಟ್ಲ, ಪಕ್ಷೇತರ ಅಭ್ಯರ್ಥಿಯಾಗಿ ಜಾನ್ ಡಿಸೋಜಾ ನಾಮಪತ್ರ ಸಲ್ಲಿಕೆ

- Advertisement -G L Acharya panikkar
- Advertisement -
vtv vitla

ವಿಟ್ಲ ಪಟ್ಟಣ ಪಂಚಾಯತ್ ನ ಜಿದಾಜಿದ್ದಿನ ಕಣವಾಗಿರುವ ವಾರ್ಡ್ ನಂಬರ್ 11 (ಪಳಿಕೆ)ರಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಈ ವಾರ್ಡ್’ನಿಂದ ಕಣಕ್ಕೆ ಇಳಿದಿದ್ದು ಜಿದಾಜಿದ್ದಿನ ಹೋರಾಟಕ್ಕೆ ಹಸಿರು ನಿಶಾನೆ ಇಂದು ದೊರಕಿದಂತಿದೆ.

vtv vitla
vtv vitla

ಇಂದು ನಾಮಪತ್ರ ಸಲ್ಲಿಕೆಯಾಗಿದ್ದು 11 ನೇ ವಾರ್ಡ್’ಗೆ ಬಿಜೆಪಿ ತನ್ನ ಪ್ರಬಲ ಅಭ್ಯರ್ಥಿ ಅರುಣ್ ವಿಟ್ಲ ಅವರನ್ನು ಕಣಕ್ಕಿಳಿಸಿದ್ರೆ, ಕಾಂಗ್ರೆಸ್ ಈ ಬಾರಿ ಬಿಜೆಪಿಯನ್ನು ಸೋಲುಣಿಸಬೇಕು ಎಂದು ಪಣತೊಟ್ಟಿದೆ. ಹೀಗಾಗಿಯೇ ತನ್ನ ಪ್ರಬಲ ಅಭ್ಯರ್ಥಿ ರಮಾನಾಥ ವಿಟ್ಲ ಅವರನ್ನು ಫೀಲ್ಡ್’ಗಿಳಿಸಿದೆ. ಇತ್ತ ಪಕ್ಷೇತರ ಅಭ್ಯರ್ಥಿಯಾಗಿ ಜಾನ್ ಡಿಸೋಜಾ ಅವರು ಸ್ಪರ್ಧಿಸುತ್ತಿದ್ದಾರೆ.

vtv vitla

ಜಾನ್ ಡಿಸೋಜಾ ಈ ಹಿಂದೆ ಬಿಜೆಪಿಯಲ್ಲಿದ್ದರು. ರಮಾನಾಥ ವಿಟ್ಲ ಅವರು ಪಂಚಾಯತ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಅರುಣ್ ವಿಟ್ಲ ಅವರು ಪಟ್ಟಣ ಪಂಚಾಯತ್ ನ ಮೊದಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ

ವಾರ್ಡ್ 11 ಬಿಜೆಪಿ ಪಾಳಯಕ್ಕೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅಷ್ಟು ಮಾತ್ರವಲ್ಲದೆ ಕಾಂಗ್ರೆಸ್’ನ ಕೆಲವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು ಬಿಜೆಪಿ ಅಭ್ಯರ್ಥಿಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಬೆಳವಣಿಗೆ ಕಾಂಗ್ರೆಸ್ ಪಾಳಯಕ್ಕೆ ಪ್ಲಸ್ ಪಾಯಿಂಟ್ ಆಗುತ್ತಾ,,? ಅರುಣ್ ವಿಟ್ಲ ಅವರೇ ಈ ಬಾರಿ ಸ್ಥಾನ ಕಾಯ್ದುಕೊಳ್ಳುತ್ತಾರಾ ಕಾದು ನೋಡಬೇಕಿದೆ.

- Advertisement -

Related news

error: Content is protected !!