Friday, April 26, 2024
spot_imgspot_img
spot_imgspot_img

ವಿಟ್ಲ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ- 5ನೇ ದಿನದ ಕಾರ್ಯಕ್ರಮದ ವಿವರ

- Advertisement -G L Acharya panikkar
- Advertisement -
vtv vitla

ವಿಟ್ಲ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ಮಾ. 12ರಂದು ಬೆಳಿಗ್ಗೆ ಗಂಟೆ 7.30 ರಿಂದ ಗಣಪತಿ ಹವನ, ಅಂಹುರ ಪೂಜೆ, ಕುಂಭೇಶ ಕರ್ಕರೀ ಪೂಜೆ, ಅಗ್ನಿ ಜನನ, ತತ್ವಹೋಮ, ತತ್ವಕಲಶ, ಮಧ್ಯಾಹ್ನ ಪೂಜೆ ನಡೆಯಲಿದೆ.

ಬಳಿಕ ಸಂಜೆ ಗಂಟೆ 4.30 ರಿಂದ ದ್ರವ್ಯಕಲಶ ಪೂರನೆ, ಬ್ರಹ್ಮಕಲಶ ಪೂರಣೆ, ಪರಿಕಲಶ ಪೂರಣೆ, ಬ್ರಹ್ಮಕಲಶ ಪೂಜೆ, ಪರಿವಾರ ದೇವರ ಕಲಶ ಪೂರಣೆ, ಅಧಿವಾಸ ಬಲಿ, ಬ್ರಹ್ಮಕಲಶ ಅಧಿವಾಸ, ದುರ್ಗಾನಮಸ್ಕಾರ ಪೂಜೆ, ರಾತ್ರಿ ಪೂಜೆ ನಡೆಯಲಿದೆ. ಸಂಜೆ ಗಂಟೆ 4.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಗಂಟೆ 10 ರಿಂದ 12.30ರವರೆಗೆ ಶ್ರೀ ಮಹಿಷಮರ್ದಿನಿ ಯಕ್ಷವೃಂದ ಪುಣಚ ಇವರಿಂದ ತಾಳಮದ್ದಳೆ “ಭಕ್ತ ಸುಧನ್ವ” ಹಾಗೂ ರಾತ್ರಿ ಗಂಟೆ 8.30 ರಿಂದ ಶ್ರೀ ಕೋದಂಡ ರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಶ್ರೀ ಹನುಮಗಿರಿ ಮೇಳ ಇವರಿಂದ “ತ್ರಿಜನ್ಮ ಮೋಕ್ಷ’ ಪೌರಾಣಿಕ ಯಕ್ಷಗಾನ ಕಥಾಪ್ರಸಂಗ ನಡೆಯಲಿದೆ.

- Advertisement -

Related news

error: Content is protected !!