Sunday, June 7, 2026
spot_imgspot_img
spot_imgspot_img

ಮನೆಗೆ ನುಗ್ಗಿ ಗನ್ ತೋರಿಸಿ 40 ಲಕ್ಷ ಹಣ ದರೋಡೆ

- Advertisement -
- Advertisement -

ಮನೆಗೆ ನುಗ್ಗಿ ಗನ್ ತೋರಿಸಿ ಬರೊಬ್ಬರಿ 40 ಲಕ್ಷ ಹಣ ದರೋಡೆ ಮಾಡಿದ ಘಟನೆ ನಿನ್ನೆ ರಾತ್ರಿ ಎಂಟು ಗಂಟೆಗೆ ಬೆಂಗಳೂರಿನಲ್ಲಿ ನಡೆದಿದೆ.

ಕಾರಿನಲ್ಲಿ ಬಂದ ಖದೀಮರು, ನೇರವಾಗಿ ಮನೆಗೆ ನುಗ್ಗಿದ್ದಾರೆ. ಬಳಿಕ ಗನ್ ತೋರಿಸಿ ಮನೆಯಲ್ಲಿದ್ದವರಿಗೆ ಹೆದರಿಸಿ ಹಣ ದೋಚಿದ್ದಾರೆ. ಘಟನೆಯ ಬಳಿಕ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ.

ಈ ವೇಳೆ ಸುಮಾರು ನಲವತ್ತು ಲಕ್ಷ ಹಣ ಮನೆಯಲ್ಲಿ ಯಾಕೆ ಇಟ್ಟಿದ್ದರೂ ಎನ್ನುವ ಪ್ರಶ್ನೆ ಮೂಡಿದೆ.
ಕೊಡಿಗೆಹಳ್ಳಿ ಪೊಲೀಸರು ಸದ್ಯ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಘಟನೆ ನಡೆದ ಅಕ್ಕ ಪಕ್ಕ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!