Saturday, May 4, 2024
spot_imgspot_img
spot_imgspot_img

ವಿಟ್ಲ: (ಫೆ: 13-14 ) ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ (ವಿಷ್ಣುನಗರ)ದಲ್ಲಿ ಜಾತ್ರಾ ಮಹೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ (ವಿಷ್ಣುನಗರ) ಶ್ರೀ ಮಲರಾಯ-ಮೂವರ್ ದೈವಂಗಳ ದೈವಸ್ಥಾನ, ಶಿಬರಿಕಲ್ಲ-ಮಾಡ ಇಲ್ಲಿ ಫೆ: 13-14 ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.

ಫೆ.06 ರಂದು ಬೆಳಗ್ಗೆ ಗೊನೆ ಕಡಿಯುವ ಕಾರ್ಯಕ್ರಮ ನಡೆಯಲಿದೆ.

ಫೆ.10 ರಂದು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಮತ್ತು ಪರಿವಾರ ದೇವರುಗಳ ಪ್ರತಿಷ್ಠಾ ವಾರ್ಷಿಕೋತ್ಸವ ಜರಗಲಿರುವುದು. ಬೆಳಿಗ್ಗೆ ಸ್ಥಳ ಶುದ್ಧಿ, 12 ಕಾಯಿ ಗಣಪತಿ ಹವನ, ನವಕ ಪ್ರಧಾನ ಕಲಶ, ಪವಮಾನ ಅಭಿಷೇಕ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ ಸಹಿತ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ನಂತರ ಸಂಜೆ 7:30ಕ್ಕೆ ಶ್ರೀ ರಂಗಪೂಜೆ ನಡೆಯುಲಿದೆ.

ಫೆ.13 ರಂದು ಬೆಳಿಗ್ಗೆ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಮೂಲಸ್ಥಳ ಕುಂಡಡ್ಕ ಬದಿಕೆರೆಯಿಂದ ಕಲಶ ತಂದು ಬಳಿಕ ಕಂಪ ಬನತ್ತಡಿ ಶ್ರೀ ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಹಾಲು ಅಭಿಷೇಕ, ತಂಬಿಲ ಮತ್ತು ಆಶ್ಲೇಷ ಬಲಿ ನಡೆಯುಲಿದೆ. ನಂತರ ನವಕ ಪ್ರಧಾನ ಕಲಶ, ಗಣಪತಿ ಹೋಮ, ಮಾತೆಯರಿಂದ ಕುಂಕುಮಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಶ್ರೀ ದುರ್ಗಾಪೂಜೆ, ರಾತ್ರಿ ನಿತ್ಯಪೂಜೆ, ಶ್ರೀ ರಂಗಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮತ್ತು ಶ್ರಿ ದೇವರ ಬಲಿ ಉತ್ಸವ, ಕಟ್ಟೆಪೂಜೆ ನಡೆಯಲಿದೆ. ಸಂಜೆ ಶ್ರೀ ವಿನಾಯಕ ಯಕ್ಷ ಕಲಾ ತಂಡ (ರಿ.) ಕೆರೆಕಾಡು-ಮೂಲ್ಕಿ ಇವರಿಂದ ಯಕ್ಷಗಾನ ಬಯಲಾಟ-“ಮಹಾಶೂರ ಭಾನು ನಂದನ” ನಡೆಯಲಿದೆ.

ಫೆ.14 ರಂದು ಶ್ರೀ ದೇವರ ಬಲಿ ಉತ್ಸವ, ಬಳಿಕ ಶ್ರೀ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಹಾಮಂಗಳಾರತಿ, ಮಂತ್ರಾಕ್ಷತೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!