
ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ, ವಿಟ್ಲ ಇವರ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ.) ಮತ್ತು ಬಂಟ್ವಾಳ ತಾಲೂಕು ಗೌಡರ ಮಹಿಳಾ ಘಟಕ ಶಾಂತಿನಗರ, ವಿಟ್ಲ, ಬಂಟ್ವಾಳ ತಾಲೂಕು, ದ.ಕ. ಇವರ ಸಹಕಾರದೊಂದಿಗೆ, ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವವು ನ. 20 ರಂದು ಬೆಳಗ್ಗೆ ಗಂಟೆ 9:30ಕ್ಕೆ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.

ದೀಪಪ್ರಜ್ವಲನೆಗೊಳಿಸಿ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಮೋನಪ್ಪ ಗೌಡ ಶಿವಾಜಿನಗರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ತೆಂಗಿನಕಾಯಿ ಒಡೆದು ಕ್ರೀಡಾ ಕೂಟವನ್ನು ಲಿಂಗಪ್ಪ ಗೌಡ ಅಳಿಕೆ ಉದ್ಘಾಟಿಸಿದರು. ಅತಿಥಿಗಳಾಗಿ ಗೌರವಾಧ್ಯಕ್ಷರು ಕೆ.ಮೋಹನ್ ಕಾಯರ್‌ಮಾರ್, ಹಿರಿಯರಾದ ಗಿರಿಯಪ್ಪಗೌಡ ಗಿರಿ ನಿವಾಸ, ಮಹಿಳಾ ಘಟಕದ ಅಧ್ಯಕ್ಷೆ ಜಲಜಾಕ್ಷಿ ಬಾಲಕೃಷ್ಣ ಪೊನ್ನೆತ್ತಡಿ, ಮಹಿಳಾ ಘಟಕದ ಕಾರ್ಯದರ್ಶಿ ಜಯಲಕ್ಷ್ಮೀ ಮಹೇಶ್, ಯುವ ವೇದಿಕೆ ಅಧ್ಯಕ್ಷ ದಿನೇಶ್ ಮಾಡ್ತೇಲ್, ಯುವ ಸಂಘ ಕಾರ್ಯದರ್ಶಿ ವೇಣು ಕುಮಾರ್ ಸಿ.ಹೆಚ್, ಯುವ ವೇದಿಕೆ ಗೌರವಾಧ್ಯಕ್ಷ ಚಿದಾನಂದ ಗೌಡ ಪೆಲತ್ತಿಂಜ ಉಪಸ್ಥಿತರಿದ್ದರು. ನಿರೂಪಣೆಯನ್ನು ಯತೀಶ್ ಪಾದೆ ನಡೆಸಿದರು.










