Sunday, June 7, 2026
spot_imgspot_img
spot_imgspot_img

ವಿಟ್ಲ: ಬಂಟ್ವಾಳ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೊದ್ದೇಶ ಸಹಕಾರ ಸಂಘ.ನಿ (ಲ್ಯಾಂಪ್ಸ್) ನಾಲ್ಕನೇ ಶಾಖೆಯ ಕಟ್ಟಡ ಉದ್ಘಾಟನಾ ಸಮಾರಂಭ

- Advertisement -
- Advertisement -

ಬ್ಯಾಂಕಿಗ್ ವಿಭಾಗ, ಟೈಲರಿಂಗ್ ಘಟಕ, ಭದ್ರತಾ ಕೊಠಡಿ, ವ್ಯಾಪಾರ ಮಳಿಗೆ ಶುಭಾರಂಭ

ವಿಟ್ಲ: ಬಂಟ್ವಾಳ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೊದ್ದೇಶ ಸಹಕಾರ ಸಂಘ ನಿ (ಲ್ಯಾಂಪ್ಸ್) ಇದರ ನೂತನ ನಾಲ್ಕನೇ ಶಾಖೆ ಕೇಪು ಗ್ರಾಮದ ಕುದ್ದುಪದವು ಶಾಖೆಗೆ ನೂತನವಾಗಿ ನಿರ್ಮಿಸಿರುವ ನೂತನ ಕಟ್ಟಡದ ಉದ್ಘಾಟನ ಕಾರ್ಯಕ್ರಮ ನಡೆಯಿತು.

ನೂತನ ಕಟ್ಟಡದ ಉದ್ಘಾಟನೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಬ್ಯಾಂಕಿಗ್ ವಿಭಾಗವನ್ನು ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರು ಯಶಸ್ವಿನಿ ಶಾಸ್ತ್ರಿ , ಟೈಲರಿಂಗ್ ಘಟಕವನ್ನು ರಾಜ್ಯ ಲ್ಯಾಂಪ್ಸ್‌ ಸಹಕಾರ ಮಹಾಮಂಡಳ ನಿ. ಮೈಸೂರು ಅಧ್ಯಕ್ಷರು ಮುತ್ತಪ್ಪ , ವ್ಯಾಪಾರ ಮಳಿಗೆಯನ್ನು ರಾಜ್ಯ ಲ್ಯಾಂಪ್ಸ್‌ ಸಹಕಾರ ಮಹಾಮಂಡಳ ನಿ. ಮೈಸೂರು ಉಪಾಧ್ಯಕ್ಷರು ಮಂಜುನಾಥ್ ಎನ್ ಎಸ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಕುಂತಲಾ ಶೆಟ್ಟಿ ಮಾಜಿ ಶಾಸಕಿ ಪುತ್ತೂರು ವಿಧಾನಸಭಾ ಕ್ಷೇತ್ರ, ಮುತ್ತಪ್ಪ, ಅಧ್ಯಕ್ಷರು ರಾಜ್ಯ ಲ್ಯಾಂಪ್ಸ್‌ ಸಹಕಾರ ಮಹಾಮಂಡಾಳ ನಿ. ಮೈಸೂರು, ಯಶಸ್ವಿನಿ ಶಾಸ್ತ್ರಿ ಅಧ್ಯಕ್ಷರು, ಕೇಪು ಗ್ರಾಮ ಪಂಚಾಯತ್, ಹೆಚ್. ಎನ್ ರಮೇಶ್ ಸಹಕಾರ ಸಂಘಗಳ ಉಪನಿಬಂಧಕರು ದ ಕ ಜಿಲ್ಲೆ, ಸುಧೀರ್ ಕುಮಾರ್ ಜೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಂಗಳೂರು ಉಪ ವಿಭಾಗ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾರಂಭಗೊಂಡ ನೂತನ ನೂತನ ಕಟ್ಟಡ, ಬ್ಯಾಂಕಿಗ್ ವಿಭಾಗ, ಟೈಲರಿಂಗ್ ಘಟಕ, ಭದ್ರಾತ ಕೊಠಡಿ, ವ್ಯಾಪಾರ ಮಳಿಗೆಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸುಂದರ ನಾಯ್ಕ ಅಧ್ಯಕ್ಷರು ಮತ್ತು ನಿರ್ದೇಶಕರು ಲ್ಯಾಂಪ್ಸ್ ಬಂಟ್ವಾಳ, ಶಿವ ನಾಯ್ಕ ಉಪಾಧ್ಯಕ್ಷರು ಲ್ಯಾಂಪ್ಸ್ ಬಂಟ್ವಾಳ, ಅರ್ಚನಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ, ಹಲವು ಶಾಖೆಗಳ ನಿರ್ದೇಶಕರು ಸಿಬ್ಬಂದಿ ವರ್ಗ, ಉರಾಭಿಮಾನಿಗಳು ಉಪಸ್ಥಿತರಿದ್ದರು.

ಪಿ ಕೇಶವ ನಾಯ್ಕ್ ಸ್ವಾಗತಿಸಿ, ಸುಧೀರ್‌ ನಿರೂಪಿಸಿ, ವರದಿಯನ್ನು ಅರ್ಚನಾ ಸಾಯ ವಾಚಿಸಿ, ಸುಂದರ್ ನಾಯ್ಕ್ ಧನ್ಯವಾದವಿತ್ತರು.

- Advertisement -

Related news

error: Content is protected !!