Tuesday, April 23, 2024
spot_imgspot_img
spot_imgspot_img

ವಿಟ್ಲ: ಬದನಾಜೆ ಕುಂಡಡ್ಕ ರಸ್ತೆಗಳ ಇಕ್ಕೆಲಗಳಲ್ಲಿ ತುಂಬಿಕೊಂಡ ಪೊದೆ; ಸಾರ್ವಜನಿಕರು, ವಾಹನ ಸವಾರರಿಗೆ ತೊಂದರೆ

- Advertisement -G L Acharya panikkar
- Advertisement -

ವಿಟ್ಲ: ಬದನಾಜೆ ಕುಂಡಡ್ಕ ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟೆ ತುಂಬಿದ್ದು ಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಡುವ ರಸ್ತೆ ಇದಾಗಿದೆ.

ಬದನಾಜೆಯಿಂದ ಕುಂಡಡ್ಕಕ್ಕೆ ಸಂಪರ್ಕಿಸುವ ರಸ್ತೆಯ ಎರಡೂ ಬದಿಗಳಲ್ಲಿ ಅಲ್ಲಲ್ಲಿ ಗಿಡ ಗಂಟೆ ಬಳ್ಳಿಗಳು ಜಾಸ್ತಿಯಾಗಿದೆ. ಇದರಿಂದ ವಾಹನ ಸವಾರರು ತೊಂದರೆ ಸಿಲುಕಿದ್ದಾರೆ. ತಿರುವುಗಳಲ್ಲಿ ಮುಂದೆ ಬರುವ ವಾಹನ ಕಾಣದ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರ ತೊಂದರೆ ಒಂದೆಡೆಯಾದರೆ, ಸಾರ್ವಜನಿಕರು ವಾಹನ ಬಂದಾಗ ರಸ್ತೆ ಬಿಟ್ಟು ಬದಿಗೆ ಸರಿಯದಂತ ಸ್ಥಿತಿ ಬಂದಿದೆ.

ಪಿಡಬ್ಲೂಡಿ ಇಲಾಖೆ ಈ ಬಗ್ಗೆ ಗಮನಹರಿಸಬೇಕಾಗಿದೆ. ಅಂತೆಯೇ ಮಳೆಗಾಲದಲ್ಲಿ ರಸ್ತೆಯಲ್ಲಿ ಮಳೆ ನೀರು ಹೋಗುತ್ತದೆ. ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ರಸ್ತೆಯಲ್ಲಿ ಮಳೆ ನೀರು ಹೋಗುತ್ತದೆ. ಇಷ್ಟು ಮಾತ್ರವಲ್ಲದೆ ಸೂಚನ ಫಲಕಗಳು ಪೊದೆಯಲ್ಲಿ ಮುಚ್ಚಿ ಹೋಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಗಮನಹರಿಸಬೇಕಾಗಿದೆ.

- Advertisement -

Related news

error: Content is protected !!