Sunday, June 14, 2026
spot_imgspot_img
spot_imgspot_img

ವಿಟ್ಲ: ಬಿ.ಜೆ.ಪಿ ಕಾರ್ಯನಿರ್ವಹಣಾ ತಂಡದ ಸಭೆ

- Advertisement -
- Advertisement -

ವಿಟ್ಲ: ಭಾರತೀಯ ಜನತಾ ಪಾರ್ಟಿಯ ಪುತ್ತೂರು ಗ್ರಾಮಾಂತರ ಮಂಡಲದ ವತಿಯಿಂದ ಚಂದಳಿಕೆಯ ಭಾರತ್ ಆಡಿಟೋರಿಯಂನಲ್ಲಿ ಮೇ.31ರಂದು ಕಾರ್ಯ ನಿರ್ವಹಣಾ ತಂಡದ ಸಭೆ ನಡೆಯಿತು.

ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮೋದಿಜೀಯವರು ಅಧಿಕಾರಕ್ಕೆ ಬಂದ 8ನೇ ವರ್ಷವನ್ನು ಎಲ್ಲಾ ಭಾಗದಲ್ಲಿ ಆಚರಿಸಬೇಕು. ಚುನಾವಣಾ ವರ್ಷವಾದ ಕಾರಣ ಎಲ್ಲಾ ಕಾರ್ಯ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಹೇಳಿದರು.

ಜಿಲ್ಲಾ ಹಿಂದುಳಿದ ವರ್ಗದಮೋರ್ಚ ಜಿಲ್ಲಾಧ್ಯಕ್ಷ ಆರ್. ಸಿ. ನಾರಾಯಣ, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ , ಜಿಲ್ಲಾ ಉಪಾಧ್ಯಕ್ಷ ವೆಂಕಟ ವಳಲಂಬೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿರಿದ್ದರು. ವಿಟ್ಲ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ ಸ್ವಾಗತಿಸಿದರು. ಕಾರ್ಯದರ್ಶಿ ಕರುಣಾಕರ ನಾಯ್ತೊಟ್ಟು ವಂದಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿ ಮನೆ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!