Friday, August 7, 2026
spot_imgspot_img
spot_imgspot_img

ವಿಟ್ಲ: ಬ್ಯಾಂಕ್ ಉದ್ಯೋಗಿ ಜಯರಾಮ ನಾಯ್ಕ ಹೃದಯಾಘಾತದಿಂದ ನಿಧನ

- Advertisement -
- Advertisement -

ವಿಟ್ಲ: ಬ್ಯಾಂಕ್ ಉದ್ಯೋಗಿಯೋರ್ವರು ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೂಜಾಪ್ಪಾಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಿಸಿರೋಡ್ ಬ್ರಾಂಚ್ ನ ಉದ್ಯೋಗಿ ಜಯರಾಮ ನಾಯ್ಕ(52) ಎಂದು ಗುರುತಿಸಲಾಗಿದೆ.

ಜಯರಾಮ ರವರು ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಪತ್ನಿ ವಿಟ್ಲ ಸರಕಾರಿ ಪ್ರೌಡ ಶಾಲೆಯ ಶಿಕ್ಷಕಿ ವೀಣಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!