Wednesday, May 15, 2024
spot_imgspot_img
spot_imgspot_img

ವಿಟ್ಲ: ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ(ರಿ), ಮಹಿಳಾ ಬಿಲ್ಲವ ವೇದಿಕೆ ಕುಡ್ತಮುಗೇರು, ಬಿಲ್ಲವ ಸಂಘ (ರಿ) ವಿಟ್ಲ ಇದರ ಬೆಳ್ಳಿ ಹಬ್ಬ ಸಂಭ್ರಮೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರ

- Advertisement -G L Acharya panikkar
- Advertisement -

ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ(ರಿ) ಮತ್ತು ಮಹಿಳಾ ಬಿಲ್ಲವ ವೇದಿಕೆ ಕುಡ್ತಮುಗೇರು ಬಿಲ್ಲವ ಸಂಘ (ರಿ) ವಿಟ್ಲ ಇದರ ಬೆಳ್ಳಿ ಹಬ್ಬ ಸಂಭ್ರಮೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರ ವಿಷ್ಣುಮೂರ್ತಿ ಭಜನಾ ಮಂದಿರ ಕಲಾ ಮಂಟಪ ಮಂಕುಡೆ- ಕುಡ್ತಮುಗೇರಿನಲ್ಲಿ ನಡೆಯಿತು.

ಕಣಚೂರ್ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಕೇಂದ್ರ ನಾಟೆಕಲ್ ಮಂಗಳೂರು ಇಲ್ಲಿನ ನುರಿತ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ನಡೆಸಿಕೊಟ್ಟ ಈ ಶಿಬಿರದಲ್ಲಿ ಕಣ್ಣಿನ ಪರೀಕ್ಷೆ, ಸ್ರೀರೋಗ, ಮತ್ತು ಪ್ರಸೂತಿ ತಜ್ಞರಿಂದ ಸಮಾಲೋಚನೆ, ಮಕ್ಕಳ ತಪಾಸಣೆ, ಕಿವಿ ಮತ್ತು ಮೂಗು ಪರೀಕ್ಷೆ, ಜನರಲ್ ವೈದ್ಯಕೀಯ ತಪಾಸಣೆ, ಉಚಿತ ಔಷಧಿ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಬೆಳ್ಳಿಹಬ್ಬ ಸಂಭ್ರಮೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಗೀತ ಪ್ರಕಾಶ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳುವುದು ವೈದ್ಯರಿಗೆ ಗ್ರಾಮೀಣ ಜನರ ಸೇವೆ ಮಾಡುವುದಕ್ಕೆ ದೊರಕಿದ ಸದಾವಕಾಶ. ಬಿಲ್ಲವ ಜಾತೀಯ ಸಂಘಟನೆಯಾದರೂ ನಾವು ನೀಡುವ ಸೇವೆ ಸಮಾಜದ ಎಲ್ಲರಿಗೂ ಲಭಿಸಲಿ ಎಂಬುವುದು ನಮ್ಮ ಉದ್ದೇಶ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಶಿಬಿರದಲ್ಲಿ ಕಣಚೂರ್ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದಿಂದ ನುರಿತ ವೈದ್ಯರಾದ ಡಾ. ಬದರಿನಾಥ್, ಡಾ. ಅಶೋಕ್ ಮತ್ತು ಸಿಬ್ಬಂಧಿ ವರ್ಗದವರು ಭಾಗವಹಿಸಿದ್ದರು. ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ರಾಜರಾಮ್ ಹೆಗಡೆ ಕುದ್ರಾಯ, ಹರೀಶ್, ಶಶಿಕಲಾ ಕುದ್ರಾಯ, ಕುಡ್ತಮುಗೇರು ಬಿಲ್ಲವ ಸಂಘದ ಅಧ್ಯಕ್ಷ ಬಾಬು ಪೂಜಾರಿ, ಕುಡ್ತಮುಗೇರು ಬಿಲ್ಲವ ಸಂಘದ ಅಧ್ಯಕ್ಷ ಬಾಬು ಪೂಜಾರಿ, ಕುಡ್ತಮುಗೇರು ಬಿಲ್ಲವ ಸಂಘ ಮತ್ತು ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು.

ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಸಿ.ಎಚ್, ಬ್ರಹ್ಮಶ್ರೀ ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ಬಿಲ್ಲವ ಸಂಘದ ಕಾರ್ಯದರ್ಶಿ ಸಂಜೀವ ಪೂಜಾರಿ ಎಂ.ಎಸ್, ಪೂರ್ವಾಧ್ಯಕ್ಷರಾದ ಚಂದ್ರಹಾಸ ಸುವರ್ಣ, ಬೆಳ್ಳಿಹಬ್ಬ ಸಂಭ್ರಮೋತ್ಸವ ಸಮಿತಿಯ ಗೌರವಾಧ್ಯಕ್ಷ ದಾಸಪ್ಪ ಪೂಜಾರಿ ನೆಕ್ಕಿಲಾರು, ಪ್ರಧಾನ ಕಾರ್ಯದರ್ಶಿ ರಾಜೇಶ್ ವಿಟ್ಲ, ಜೊತೆ ಕಾರ್ಯದರ್ಶಿ ಲಕ್ಷಣ ಪೂಜಾರಿ ಎಸ್ ಶಿಬಿರದಲ್ಲಿ ಪಾಲ್ಗೊಂಡು ಸಹಕರಿಸಿದರು. ಪ್ರಶಾಂತ್ ಪರ್ತಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರ್ಷಿತ್ ಸ್ವಾಗತಿಸಿ ಬಳಿಕ ವಂದನಾರ್ಪಣೆಗೈದರು. ನೂರಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.

- Advertisement -

Related news

error: Content is protected !!