Monday, April 29, 2024
spot_imgspot_img
spot_imgspot_img

ವಿಟ್ಲ: ಮನೆಯಲ್ಲಿಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

- Advertisement -G L Acharya panikkar
- Advertisement -

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ನಡೆದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ ನಾಗೇಶ್‌ ಶೆಟ್ಟಿ ಅವರ ಪತ್ನಿ ಪ್ರೀತಿ ಶೆಟ್ಟಿ ಜೂನ್ 8 ರಂದು ಪುತ್ತೂರಿನ ಬಂಟರ ಭವನದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಹೋಗಿ ಬಂದು ಚಿನ್ನಾಭರಣವನ್ನು ಸುಮಾರು ಮದ್ಯಾಹ್ನ 3 ಗಂಟೆಯ ಹೊತ್ತಿಗೆ ಮನೆಯಲ್ಲಿ ಇಟ್ಟಿದ್ದಾರೆ. ನಂತರ ಮರುದಿನ ಮತ್ತೊಂದು ಮದುವೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾಗ ಚಿನ್ನಾಭರಣವನ್ನು ಹುಡುಕಾಡಿದ್ದಾರೆ. ಈ ವೇಳೆ ತಮ್ಮ ಮನೆಯಲ್ಲಿ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.

ಕಳ್ಳರು ಸುಮಾರು 32 ಗ್ರಾಂ ತೂಕದ ಚಿನ್ನದ ಸರ ಅಂದಾಜು ಮೌಲ್ಯ-64000/- 20 ಗ್ರಾಂತೂಕದ ಚಿನ್ನದ ಬ್ರಾಸ್‌ ಲೈಟ್ ಅಂದಾಜು ಮೌಲ್ಯ-40,000/-, ಒಟ್ಟು 12 ಗ್ರಾಂ ತೂಕದ ಚಿನ್ನದ ಉಂಗುರ-03 ಅಂದಾಜು 24,000/- ಸದ್ರಿ ಚಿನ್ನಾಭರಣಗಳ ಒಟ್ಟು ಮೌಲ್ಯ 1,28,000/-, ಗೊಲ್ಡ್‌ ಬಣ್ಣದ ಲೇಡಿಸ್‌ ರಿಸ್ಟ್‌ ವಾಚ್ ಅಂದಾಜು 500/- ರೂ, ಅರ್ಟಿಫಿಶಲ್‌ ಕೈ ಬಳೆ ಅಂದಾಜು 100/- ರೂ. ಸದ್ರಿ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಕಳವಾಗಿರುವ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 1,28,600/- ರೂಪಾಯಿ ಆಗಬಹುದು ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

Related news

error: Content is protected !!