



ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಇಡ್ಕಿದು ಗ್ರಾಮ ಪಂಚಾಯತು, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆ, ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಕುಂಡಡ್ಕ, ಕುಳ, ಗ್ರಾಮ ವಿಕಾಸ ಸಮಿತಿ ಇಡ್ಕಿದು, ಅಮೃತ ಸಿಂಚನ ರೈತ ಸೇವಾ ಒಕ್ಕೂಟ ಇಡ್ಕಿದು, ಇವರ ಜಂಟಿ ಸಹಯೋಗದಲ್ಲಿ ನೇಗಿಲ ನೆನಪು ಭತ್ತದ ಗದ್ದೆ ನಾಟಿ ಕಾರ್ಯಕ್ರಮವು ಬೀಡಿನಮಜಲು ಪದ್ಮಾವತಿ ಶೆಟ್ಟಿಯವರ ಗದ್ದೆಯಲ್ಲಿ ನಡೆಯಿತು.


ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀ ಶೇಖರ ನಾರಾವಿಯವರು ದೀಪ ಬೆಳಗಿ ಉದ್ಘಾಟಿಸಿದರು ಈ ವೇಳೆ ಮಾತನಾಡಿದ ಅವರು ಭೂಮಿಯ ಯಾವುದೇ ಭಾಗ ಕೃಷಿ ಇಲ್ಲದೆ ಹಡೀಲು ಬೀಳಬಾರದು, ಅದು ಹಣ್ಣಿನ ಗಿಡ, ತೋಟಗಳಿಂದ ಸಮೃದ್ದವಾಗಿರಬೇಕು.
ಭತ್ತದ ಬೇಸಾಯದಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯ ವೃದ್ದಿಯಾಗುತ್ತದೆ, ಗದ್ಧೆಯಲ್ಲಿ ನೀರು ನಿಂತು ಅದು ಅಂತರ್ಜಲ ವೃದ್ದಿಗೂ ಸಹಕಾರಿ. ಇವತ್ತು ಪ್ರಾರಂಭವಾದ ಈ ಕಾರ್ಯ ನಿರಂತರವಾಗಿ ಮುಂದುವರಿಯುವಂತಾಗಲಿ ಎಂದು ಶುಭ ಹಾರೈಸಿದರು.


ಬಂಟ್ವಾಳ ಕೃಷಿ ಸಹಾಯಕ ನಿರ್ದೇಶಕ ಶ್ರೀ ಚೆನ್ನಕೇಶವ ಮೂರ್ತಿಯವರು ಕೃಷಿ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ವಿಟ್ಲ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಎಸ್ ಕೆ, ಸರಿಕ್ಕಾರ್‌ರವರು ಭತ್ತದ ಬೆಳೆ ಪ್ರೊತ್ಸಾಹಕ್ಕಾಗಿ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಬಂಟ್ವಾಳ: ಹೆಂಡತಿಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ತಮ್ಮನನ್ನು ಬರ್ಬರವಾಗಿ ಹತ್ಯೆಗೈದ ಅಣ್ಣ!
ಅಮೃತ ಸಿಂಚನ ರೈತ ಸೇವಾ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಕೆ.ಯಸ್ ಕೋವಿಡ್ ನ ಸಂಕಷ್ಟದ ಕಾಲದಲ್ಲಿ ರೈತರು ಎಲ್ಲರಿಗಿಂತ ಕಡಿಮೆ ತೊಂದರೆ ಅನುಭವಿಸಿದ್ದಾರೆ, ಕೃಷಿ ಬದುಕಿಗೆ ಪೂರಕವಾಗಲಿ ಎಂಬ ಆಶಯದಿಂದ ಇಡ್ಕಿದು ಹಾಗೂ ಕುಳ ಗ್ರಾಮದ 3 ಎಕ್ರೆ ಜಾಗದಲ್ಲಿ ಭತ್ತದ ಬಿತ್ತನೆ ನಾಟಿ ಕಾರ್ಯಗಳನ್ನು 3 ದಿನಗಳಿಂದ ನಡೆಸಲಾಗಿದೆ. ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳನ್ನು ಸ್ಮರಿಸಿದರು.


ಇಡ್ಕಿದು ಸೇವಾ ಸಹಕಾರಿ ಸಂಘದ ಅದ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು, ಇಡ್ಕಿದು ಗ್ರಾಮ ಪಂಚಾಯತು ಅಭಿವೃದ್ದಿ ಅಧಿಕಾರಿ ಗೋಕುಲ್ ದಾಸ್ ಭಕ್ತ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಕೆ,ಯಸ್, ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಕುಂಡಡ್ಕದ ದಯಾನಂದ ಶೆಟ್ಟಿ ಉಜಿರೆಮಾರು,
ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಕೋಂಕೋಡಿ ಪದ್ಮನಾಭ, ಇಡ್ಕಿದು ಸೇವಾ ಸಹಕಾರಿ ಸಂಘದ ಮಾಜಿ ಆಧ್ಯಕ್ಷ ಗೋಪಾಲಕೃಷ್ಣ ಭಟ್, ರಮೆಶ ಭಟ್ ಎಂ ಎಚ್, ಪ್ರಪುಲ್ಲಚಂದ್ರ ಪಿ ಜಿ. ಇಡ್ಕಿದು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಮ ಭಟ್ ನೀರಪಳಿಕೆ ಮತ್ತು ನಿರ್ದೇಶಕರು, ಇಡ್ಕಿದು ಗ್ರಾಮ ಪಂಚಾಯತು ಸದಸ್ಯರು, ಅಮೃತ ಸಿಂಚನ ರೈತ ಸೇವಾ ಒಕ್ಕೂಟದ ಪದಾಧಿಕಾರಿಗಳು, ಸ್ವ ಸಹಾಯ ಸಂಘದ ಸದಸ್ಯರು, ರೈತ ಮಹಿಳೆಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಮುಂಬೈ ಉದ್ಯಮಿಗಳ ಬ್ಲಾಕ್ ಮೈಲ್; ವಿಟ್ಲ ಮೂಲದ ಜೆಪಿ ಶೆಟ್ಟಿ ಗಾಗಿ ಕ್ರೈಂ ಬ್ರಾಂಚ್ ಪೊಲೀಸರಿಂದ ಶೋಧ..!
ಇಡ್ಕಿದು ಗ್ರಾಮ ಪಂಚಾಯತು ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಎಸ್ ಧನ್ಯವಾದಗೈದರು. ಈಶ್ವರ ಕುಲಾಲ್ ನಿರೂಪಿಸಿದರು.




