Thursday, September 10, 2026
spot_imgspot_img
spot_imgspot_img

ವಿಟ್ಲ: ಮಾಜಿ ಗರ್ಲ್ ಫ್ರೆಂಡ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ; ಯುವತಿಯಿಂದ ಆರೋಪಿ ವಿರುದ್ಧ ದೂರು ದಾಖಲು

- Advertisement -
- Advertisement -

ವಿಟ್ಲ: ಕೆಲವು ತಿಂಗಳುಗಳಿಂದ ಯುವತಿಯ ಮೇಲಿನ ಪ್ರೀತಿಯ ವಿಚಾರಕ್ಕಾಗಿ ಯುವಕನೋರ್ವ ಯುವತಿಯ ಮನೆಗೆ ಬಂದು ಜಗಳ ಮಾಡಿ ಬೆದರಿಕೆ ಹಾಕುತ್ತಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ 21 ವರ್ಷದ ಯುವತಿಗೆ ಇರ್ಫಾನ್ ಎಂಬಾತ 3 ವರ್ಷದಿಂದ ಪರಿಚಯವಿದ್ದು, ಸುಮಾರು 8 ತಿಂಗಳ ಹಿಂದೆ ಯುವತಿಯ ಮೇಲಿನ ಪ್ರೀತಿಯ ವಿಚಾರಕ್ಕಾಗಿ ಇರ್ಫಾನ್ ಯುವತಿಯ ಮನೆಗೆ ಬಂದು ಜಗಳ ಮಾಡಿದ್ದು, ಬಳಿಕ ಯುವತಿ ಮತ್ತು ಆಕೆಯ ತಂಗಿಗೆ ಕರೆ ಮಾಡಿ ಯುವತಿಯ ಹಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಯುವತಿಗೆ ನಿಶ್ಚಯವಾಗಿದ್ದ ಮದುವೆಯನ್ನು ಮುರಿಯುವುದಾಗಿ ಬೆದರಿಕೆ ಹಾಕುತ್ತಿದ್ದನು.

ಯುವತಿಯನ್ನು ಮದುವೆಯಾಗುವ ಹುಡುಗನ ಮನೆಯವರಿಗೂ ಕರೆ ಮಾಡಿ ಬೆದರಿಸಿ ಮದುವೆಯನ್ನು ಕೂಡ ಮುರಿದಿದ್ದಾನೆ. ಆರೋಪಿ ಇರ್ಫಾನ್ 2020 ರ ಡಿಸೆಂಬರ್ ನಿಂದ ಈವರೆಗೆ ಯುವತಿ ಹಾಗೂ ಯುವತಿಯ ಮನೆಯವರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದು, ಈ ಬಗ್ಗೆ ಯುವತಿ ನೀಡಿದ ದೂರಿನನ್ವಯ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!