Friday, May 17, 2024
spot_imgspot_img
spot_imgspot_img

ವಿಟ್ಲ: ಮುಸ್ಲಿಂ ವರನಿಂದ ಕೊರಗಜ್ಜ ದೈವಕ್ಕೆ ಅವಮಾನ ಪ್ರಕರಣ; ಬಾಷಿತ್ ಬಂಧನಕ್ಕೆ ಪೊಲೀಸ್ ಇಲಾಖೆಯಿಂದ ಲುಕ್ ಔಟ್ ನೋಟಿಸ್ ಜಾರಿ; ಕೇರಳ ಕರ್ನಾಟಕ ಮಹಾರಾಷ್ಟ್ರದ ಏರ್’ಪೋರ್ಟ್’ಗಳಲ್ಲಿ ಕಟ್ಟೆಚ್ಚರ

- Advertisement -G L Acharya panikkar
- Advertisement -

ವಿಟ್ಲ: ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ನಡೆದ ವಿವಾಹದಂದು ಮುಸ್ಲಿಂ ವರನು ಕೊರಗಜ್ಜನನ್ನು ಹೋಲುವ ವೇಷ ಧರಿಸಿದ್ದು ಕರಾವಳಿಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿದುಕೊಂಡು ವರ ಆಗಮಿಸಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರಿನಲ್ಲಿ ನಡೆದಿತ್ತು.

ವರ ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ವಿವಿಧ ಸಂಘಟನೆಗಳು ಇಂತಹ ಘಟನೆ ಮರುಕಳಿಸಬಾರದೆಂದು ಹಾಗೂ ಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಒತ್ತಡವನ್ನು ಹೇರಿದ್ದರು.

ಮದುಮಗ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸೋಂಕಲ್ ಅಗರ್ತಿಮೂಲೆ ಸಮೀಪದ ಉಮ್ರುಲ್ಲಾ ಬಾಷಿತ್ ಬಂಧನಕ್ಕೆ ಲುಕ್ ಔಟ್ ನೋಟಿಸ್ ಜಾರಿಯಾಗಿದೆ. ಆದರೆ ಈತ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದು ವಿದೇಶಕ್ಕೆ ಪರಾರಿಯಾಗುವ ಯತ್ನವನ್ನು ಸದ್ದಿಲ್ಲದೆ ನಡೆಸಿದ್ದ ಎಂದು ಮೂಲಗಳು ತಿಳಿಸಿದೆ.

READ THIS: ವಿಟ್ಲ: ಮದುಮಗ ಕೊರಗಜ್ಜನ ವೇಷ ಧರಿಸಿ ಅವಮಾನ ಪ್ರಕರಣ; ಆರೋಪಿ ವರನ ನಿರೀಕ್ಷಣಾ ಜಾಮೀನು ಅರ್ಜಿ ವಜಾ

1 ತಿಂಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ತಲೆಮರೆಸಿಕೊಂಡ ಆರೋಪಿ ಬಾಷಿತ್ ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಏರ್ಪೋರ್ಟುಗಳಲ್ಲಿ ಕಟ್ಟೆಚ್ಚರವನ್ನು ವಹಿಸಿದೆ. ವಿಟ್ಲ ಪೊಲೀಸರು ಈತನನ್ನು ಬಂಧಿಸಲು ತಂಡವನ್ನು ರಚಿಸಿದ್ದು ಕೇರಳದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Related news

error: Content is protected !!