Friday, March 29, 2024
spot_imgspot_img
spot_imgspot_img

ವಿಟ್ಲ: ಮೂರ್ಜೆ (ಮೂರ್ಕಜೆ) ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟಿನ ವತಿಯಿಂದ ಗುರುವಂದನಾ – ಕುಟುಂಬ ಸಮ್ಮಿಲನ

- Advertisement -G L Acharya panikkar
- Advertisement -

ವಿಟ್ಲ: ಮೂರ್ಜೆ (ಮೂರ್ಕಜೆ) ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟಿನ ವತಿಯಿಂದ ಗುರುವಂದನಾ – ಕುಟುಂಬ ಸಮ್ಮಿಲನ ಕಾರ್ಯಕ್ರಮ ವಿಟ್ಲ ಅಕ್ಷಯ ಸಭಾಭವನದಲ್ಲಿ ನಡೆಯಿತು.

ಕುಟುಂಬದ ಎಲ್ಲಾ ವಿಭಾಗದ ವತಿಯಿಂದ ಗಣಪತಿ ಹವನ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುವಂದನೆ ಕಾರ್ಯಕ್ರಮ ನಡೆಯಿತು. ಮೂರ್ಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ಅಧ್ಯಕ್ಷ ಕೆ.ಎಸ್ ಗೋಪಾಲಕೃಷ್ಣ ಗೌಡ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ “ನಮ್ಮ ಮುಕ್ತಿಗೆ ಜ್ಞಾನ ಅಗತ್ಯ. ಜ್ಞಾನ ಸಂಪಾದನೆಗೆ ಉಪಾಸನೆ ಅಗತ್ಯದ. ಶ್ರದ್ದಾ ಭಕ್ತಿಯಿಂದ ಬದುಕಿದರೆ ಜೀವನ‌ಪಾವನವಾಗುತ್ತದೆ. ಗುರುವಿನ ಮಾತಿನಲ್ಲಿ ನಂಬಿಕೆ ಇಟ್ಟರೆ ಬದುಕು ಹಸನು. ಈ ಕಾರ್ಯಕ್ರಮದ ಉದ್ದೇಶ ಖಂಡಿತವಾಗಿ ಈಡೇರುತ್ತದೆ. ಶ್ರದ್ದೆ ಕಳಕೊಂಡರೆ ಸಿದ್ದಿ ಸಿಗಲು ಸಾಧ್ಯವಿಲ್ಲ. ಸಿದ್ದಿಗೆ ಶ್ರಮ ತಪಸ್ಸು ಅಗತ್ಯ. ಬೌದ್ದಿಕ ಯಶಸ್ಸಿನ ಮೊದಲು ಮನುಷ್ಯನ ಹೃದಯ ಬೆಸೆಯುವ ಕೆಲಸವಾಗಬೇಕು. ಕೋಪ ಧ್ವೇಷವನ್ನು ಪ್ರೀತಿ ಮರೆಮಾಚುತ್ತದೆ. ಮನೆಗಳ ಸಮ್ಮಿಲನವಾಗುವ ಮೊದಲು ಹೃದಯ ಸಮ್ಮಿಲನ ವಾಗಬೇಕು. ಈ ಒಂದು ಕುಟುಂಬ ಸಮ್ಮಿಲನ ಸತ್ಯ ಒಳಿತಿನ ಮಿಲನವಾಗಲಿ” ಎಂದು ಆಶೀರ್ವಚನ ನೀಡಿದರು

ಕಾವೂರು ಶಾಖಾಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ರವರ ಆಶೀರ್ವಚನ‌ ನೀಡಿ ಗುರು ಭಲವಿದ್ದರೆ ಯಾವುದೇ ಕೆಲಸ ಯಶಸ್ವಿಯಾಗಲು ಸಾಧ್ಯ. ಧಾರ್ಮಿಕ ನಂಬಿಕೆ ಮೇಲೆ ಕುಟುಂಬಗಳು ನಿಂತಿವೆ. ಗುರು ತೋರುವ ದಾರಿಯಲ್ಲಿ ನಡೆದರೆ ಬದುಕು ನಂದಾ ದೀಪವಾಗುತ್ತದೆ. ತುಳುನಾಡಿನಲ್ಲಿ ತನ್ನದೇ ಆದ ವೈವಿದ್ಯವಾದ ಸಂಪ್ರದಾಯದಲ್ಲಿ ದೈವಾರಾಧನೆ ನಡೆಯುತ್ತಿದೆ. ಧರ್ಮ ಸಂಸ್ಕೃತಿ ಉಳಿಯಲು ಹಿರಿಯರು ಹಾಕಿರುವಂತಹ ಧರ್ಮದ ಭುನಾದಿ ಕಾರಣ. ಧರ್ಮ ಸಂಸ್ಕೃತಿ ತಲೆ‌ತಲಾಂತರದಿಂದ ಬಂದಿರುವುದು. ದೃಡವಿಶ್ವಾಸ ಕಳೆದುಕೊಂಡು ದಾಸ್ಯತ್ವದ ಬದುಕು ನಡೆಸಬಾರದು.ಆತ್ಮ ವಿಶ್ವಾಸದಿಂದ ಮುನ್ನುಗ್ಗುವ ಮನಸ್ಸು ನಮ್ಮದಾಗಬೇಕು ಎಂದರು.

ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ಗೌಡ ಸಮಾಜದ ಮೂರ್ಜೆ ಮನೆತನ‌ ಐತಿಹಾಸಿಕ ಕಾರ್ಯಕ್ರಮವನ್ನು‌ ಮಾಡಿದೆ. ಈ ಒಂದು ಒಗ್ಗಟ್ಟಿನ ಕಾರ್ಯಕ್ರಮ ಸಮಾಜದಲ್ಲಿ ಇತಿಹಾಸ ಸೃಷ್ಟಿಸಿದೆ. ಗೌಡ ಸಮಾಜ ಕೃಷಿ ಪರಂಪರೆಯ ಮೂಲಕ ಸಮಾಜಕ್ಕೆ ಅದರದೇ ಆದ ಕೊಡುಗೆಯನ್ನು‌ ನೀಡುತ್ತಾ ಬಂದಿದೆ. ಸಮಾಜದಲ್ಲಿ ಸಮಾಜಮುಖಿಯಾಗಿ ಆಚಾರ, ವಿಚಾರವನ್ನು‌ ಮೈಗೂಡಿಸಿಕೊಳ್ಳಲು ಸಂಘಟನೆ ಅತೀ ಅಗತ್ಯ ಎನ್ನುವುದನ್ನು ಮೂರ್ಜೆ ತರವಾಡಿನವರು ತೋರಿಸಿಕೊಟ್ಟಿದ್ದಾರೆ. ದೈವ ದೇವರ ಆರಾಧನೆ ಗಳು ಪಾರಂಪರಿಕವಾಗಿ ಮುಂದುವರಿಯಲು ಇಂತಹ ಕಾರ್ಯಕ್ರಮ ಅತೀ ಅಗತ್ಯ. ಹತ್ತು ಕುಟುಂಬ, ಹದಿನೆಂಟು‌ ಗೋತ್ರವನ್ನು ಹೊಂದಿರುವ ಕುಟುಂಬದಲ್ಲಿ ನಂದರ ವಂಶವೂ ಒಂದು. ನಮ್ಮ ರಾಜ್ಯದಲ್ಲಿ ಗೌಡ ಸಮುದಾಯಕ್ಕೆ ವಿಶಿಷ್ಟ ಗೌರವವಿದೆ. ನಾಡಿಗೆ ಮೂರು ಧಾರ್ಶನಿಕರನ್ನು‌ ಕೊಟ್ಟ ಸಮಾಜವೆಂದರೆ ಅದು ಗೌಡ ಸಮಾಜ. ಹಲವಾರು ಮಹತ್ತರ ಕಾರ್ಯ ಮಾಡಿರುವವರಲ್ಲಿ ಗೌಡ ಸಮಾಜದ ಬಂಧುಗಳು ಹಲವಾರಿದೆ. ಮನಸ್ಸಿನ ಭಾವನೆಯನ್ನು ಹೊರಹಾಕುವ ಸಮಯವಿದು. ಸಮಾಜಕ್ಕೆ ಕೊಡುಗೆ ಕೊಡುವ ಕೆಲಸ ಈ ನಂದರ ವಂಶದಿಂದ ಆಗಲಿ. ನಮ್ಮೊಳಗಿನ ಕಚ್ಚಾಟವನ್ನು‌ ಬಿಟ್ಟು ಎಲ್ಲರನ್ನೂ ಒಟ್ಟುಗೂಡಿಸುವ ಕೆಲಸ ಎಲ್ಲರಿಂದಲೂ ಆಗಬೇಕಾಗಿದೆ ಎಂದರು.

ರಾಜ್ಯ ಒಕ್ಕಲಿಗ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರಾದ ಡಾ.ಕೆ.ವಿ. ರೇಣುಕಾಪ್ರಸಾದ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶ್ ಗೌಡ, ದೈವಜ್ಞರಾದ ಶಶಿಧರನ್ ಮಾಂಗಾಡು, ರಾಜೇಶ್, ಗೋಪಾಲಕೃಷ್ಣ, ಕೆ.ಎಫ್.ಡಿ.ಸಿ. ಅಧ್ಯಕ್ಷ ಎ. ವಿ. ತೀರ್ಥರಾಮ ಅಂಬೆಕಲ್ಲು, ವಿಟ್ಲ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಮೋಹನ ಗೌಡ ಕಾಯರ್‌ಮಾ‌ರ್, ವಿಟ್ಲ ಕೃಷ್ಣಯ್ಯ ಕೆ., ರವೀಂದ್ರನಾಥ ಕೇವಳ, ನಿತ್ಯಾನಂದ ಮುಂಡೋಡಿ, ಅಕ್ಷಯ ಕೆ. ಸಿ., ಮೋನಪ್ಪ ಗೌಡ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂದನ ಮೂರ್ಜೆ ಪ್ರಾರ್ಥಿಸಿದರು. ಜಂಟಿ ಕಾರ್ಯದರ್ಶಿ ವಸಂತ ಉಲ್ಲಾಸ್ ಬೆಳ್ಳಾರೆ ಸ್ವಾಗತಿಸಿದರು. ಟ್ರಸ್ಟಿ ರಾಧಾಕೃಷ್ಣ ಪಿ. ಎಂ. ಮೂರ್ಜೆ ಪ್ರಾಸಗತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ನವೀನ ಮುರೂರು ವಂದಿಸಿದರು. ಭವ್ಯ ರಜತ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!