ವಿಟ್ಲ: ವಿಟ್ಲದ ಮೇಗಿನಪೇಟೆ ತೈಬಾ ಕಾಂಪ್ಲೆಕ್ಸ್ ನಲ್ಲಿ ನೂತನ ಎಂ.ಎಚ್ ಮೋಟರ್ಸ್ (ವಿದ್ಯುತ್ ಚಾಲಿತ ಸ್ಕೂಟರ್) ಶೋರೂಮ್ ಶುಭಾರಂಭಗೊಂಡಿತು.
ವಿಟ್ಲ ಕೇಂದ್ರ ಜುಮ್ಮಾ ಮಸೀದಿ ಖತೀಬು ಮತ್ತು ದುವಾಃ ಆಶೀರ್ವಚನ ನೀಡಿದರು.


ವಿಟ್ಲ ಶೋಕಮಾತೆಯ ಐವನ್ ಮೈಕಲ್ ರೋಡ್ರಿಗಸ್, ಕುಡ್ತಮುಗೇರು ಮಸೀದಿ ಖತೀಬು
ಮಜೀದ್ ಉಸ್ತಾದ್, ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಅವರು ಜತೆಯಾಗಿ ನೂತನ ಶೋರೂಂ ಅನ್ನು ಉದ್ಘಾಟಿಸಿದರು.


ಅನೀಸ್ ಕುಡ್ತಮುಗೇರು ಮತ್ತು ಬದ್ರುದ್ದೀನ್ ಪುಣಚ ಅವರ ಪಾಲುದಾರಿಕೆಯಲ್ಲಿ ಈ ಸಂಸ್ಥೆ ಶುಭಾರಂಭಗೊಂಡಿದ್ದು, ಇಲ್ಲಿ ವಿದ್ಯುತ್ ಚಾಲಿತ ಎಲ್ಲ ವಿಧದ ದ್ವಿಚಕ್ರ ವಾಹನಗಳು ಗ್ರಾಹಕರಿಗೆ ದೊರೆಯಲಿದೆ. ವಿಟ್ಲದಲ್ಲಿ ಮೊತ್ತ ಮೊದಲ ವಿದ್ಯುತ್ ಚಾಲಿತ ಶೋರೂಂ ಇದಾಗಿದೆ.


ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮಹಮ್ಮದ್, ನ್ಯಾಯವಾದಿ ನಟೇಶ್ ವಿಟ್ಲ, ವಿಟ್ಲ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಶೀತಲ್, ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಶಾಕೀರ್ ಅಳಕೆಮಜಲು, ಕಲಂದರ್ ಪರ್ತಿಪ್ಪಾಡಿ, ಸಂಸ್ಥೆಯ ವ್ಯವಸ್ಥಾಪಕಿ ವಿನುತ ಮೊದಲಾದವರು ಉಪಸ್ಥಿತರಿದ್ದರು.









