Monday, May 6, 2024
spot_imgspot_img
spot_imgspot_img

ವಿಟ್ಲ: ರಸ್ತೆ ಸುರಕ್ಷಾ ಸಪ್ತಾಹ ಮತ್ತು ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ ಪೊಲೀಸ್‌ ಠಾಣೆ ಮತ್ತು ಭಾರತ್‌ ಸ್ಕೌಟ್‌ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ಸಹಯೋಗದಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಮತ್ತು ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ರಸ್ತೆ ಸುರಕ್ಷಾ ಸಪ್ತಾಹ ಮತ್ತು ಅಪರಾಧ ತಡೆ ಮಾಸಾಚರಣೆಯ ಬೃಹತ್‌ ರ್‍ಯಾಲಿಯು ವಿಟ್ಲ ಪೇಟೆಯುದ್ದಕ್ಕೂ ಸಾಗಿ ಬಂತು. ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಸಂತರೀಟಾ ಆಂಗ್ಲ ಮಾಧ್ಯಮ ಶಾಲೆ,ವಿಠಲ ಪ್ರೌಢಶಾಲೆ ಇಲ್ಲಿಯ ಸ್ಕೌಟ್ &ಗೈಡ್ಸ್ ನ ಒಟ್ಟು 160ಮಕ್ಕಳು ಜಾಥಾದಲ್ಲಿ ಭಾಗವಹಿಸಿದರು.

ಸುದರ್ಶನ್‌ ಪಡಿಯಾರ್‌ ಅಧ್ಯಕ್ಷರು ಭಾರತ್‌ ಸ್ಕೌಟ್‌ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ನಾಗರಾಜ್‌ ಹೆಚ್‌.ಇ ಪೊಲೀಸ್ ಇನ್ಸ್ಪೆಕ್ಟರ್‍ ವಿಟ್ಲ ಆರಕ್ಷಕ ಠಾಣೆ ಇವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ವಿಟ್ಲ ಠಾಣೆಯ ಟ್ರಾಫಿ‌ಕ್‌ ಎಸ್‌.ಐ ಗೋವಿಂದ ದಡ್ಡಮಣಿಯವರು ನೀಡಿದರು. ವಿಟ್ಲ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಎಸ್‌ ಐ ಶ್ರೀಮತಿ ವಿದ್ಯಾ ಇವರು ಪೋಕ್ಸೋ ಕಾಯಿದೆ ಬಗ್ಗೆ ಮಾಹಿತಿ ನೀಡಿದರು. ವಿಟ್ಲ ಪೋಲಿಸ್ ಕಾನ್ಸ್ಟೇಬಲ್ ಮನೋಜ್‌ ಇವರು ಗನ್‌ ಹಿಡಿದು ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಭಾರತ್‌ ಸ್ಕೌಟ್‌ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ಉಪಾಧ್ಯಕ್ಷೆ ಜೆಸಿಂತಾ ಮಸ್ತರೇನಸ್, ಎಡಿಸಿ ಮೀರಾ ಗೊಂಸ್ಲಾ, ಲಯನ್ಸ್‌ ಕ್ಲಬ್‌ ವಿಟ್ಲ ಸಿಟಿ ಅಧ್ಯಕ್ಷ ಜಯರಾಮ್‌ ಬಲ್ಲಾಳ್‌, ಸದಸ್ಯ ಮೋಹನ್ ಕಟ್ಟೆ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರತೀಪ್ ಎ.ಆರ್. ಉಪಸ್ಥಿತರಿದ್ದರು. ಪೊಲೀಸ್‌ ಕಾನ್ಸ್ಟೇಬಲ್‌ ಪ್ರಸನ್ನ ಕುಮಾರ್‌, ಶ್ರೀಧರ್, ಹಾಗೂ ಗೈಡ್ ಕ್ಯಾಪ್ಟನ್ ಗಳಾದ ಜಯಶ್ರೀ, ಹೆಲೆನ್, ನಮಿತಾ, ವೀಣಾ ಭಾಗವಹಿಸಿದರು. ಪ್ರದೀಪ್‌ ಕನ್ಯಾನ ಸ್ವಾಗತಿಸಿ ಜಯಶ್ರೀ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ವಿಟ್ಲ ಆರಕ್ಷಕ ಠಾಣೆಯ ವತಿಯಿಂದ ತಂಪು ಪಾನೀಯ ನೀಡಿ ಸಹಕರಿಸಿದರು.

- Advertisement -

Related news

error: Content is protected !!