Saturday, May 4, 2024
spot_imgspot_img
spot_imgspot_img

ವಿಟ್ಲ ರೇಂಜ್ ಪ್ರತಿಭಾ ಸಂಗಮ : ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಉಕ್ಕುಡ ಮದ್ರಸ

- Advertisement -G L Acharya panikkar
- Advertisement -

ವಿಟ್ಲ: ಎಸ್.ಜೆ.ಎಂ, ಎಸ್.ಎಂ.ಎ ಕರ್ನಾಟಕ ವರ್ಷಂಪ್ರತಿ ಪ್ರತಿಭಾ ಸಂಗಮ ಎಂಬ ಶೀರ್ಷಿಕೆಯಡಿಯಲ್ಲಿ ಮದ್ರಸ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಸುತ್ತಿದ್ದು, ಪ್ರಸ್ತುತ ವರ್ಷದ ವಿಟ್ಲ ರೇಂಜ್ ಮಟ್ಟದ ಪ್ರತಿಭಾ ಸಂಗಮವು ಪೆರುವಾಯಿ ಬದ್ರೀಯ ಜುಮಾ ಮಸೀದಿ ವಠಾರದಲ್ಲಿ‌ ನಡೆಯಿತು.

ನೂರುಲ್ ಹುದಾ ಮದ್ರಸ ಉಕ್ಕುಡ 411 ಅಂಕಗಳೊಂದಿಗೆ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಮಂಗಳಪದವು ಮದ್ರಸ ವಿದ್ಯಾರ್ಥಿಗಳು ದ್ವಿತೀಯ ಮತ್ತು ಒಕ್ಕೆತ್ತೂರು ತೃತೀಯ ಸ್ಥಾನವನ್ನು ಪಡೆದರು. ಚಾಂಪಿಯನ್ ಪಟ್ಟವನ್ನು ಪಡೆದ ಉಕ್ಕುಡ ವಿದ್ಯಾರ್ಥಿಗಳಿಗೆ ನಾಡಿನ ಜಮಾಅತ್ ಬಾಂಧವರು ಮಸೀದಿ ವಠಾರದಲ್ಲಿ ಮುದರ್ರಿಸ್ ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಧ್ಯಕ್ಷ ಸ್ಥಾನದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದರು .

ಜಮಾಅತ್ ಕಮೀಟಿ ಅಧ್ಯಕ್ಷ T.H.M.A ಅಬ್ಬಾಸ್ ಹಾಜಿ ,ಪ್ರಧಾನ ಕಾರ್ಯದರ್ಶಿ U.ಶರೀಫ್ ತ್ವಯಿಬಾ, ಮದ್ರಸ ಮುಖ್ಯ ಶಿಕ್ಷಕರು ಹಮೀದ್ ಮದನಿ ಕಾನತ್ತಡ್ಕ, ಯಾಸೀನ್ ಸಅದಿ ವಿಟ್ಲ, ಅಬ್ದುಲ್ ಖಾದರ್ ಝುಹ್ರಿ ಅಳಕೆಮಜಲ್, ಅಲ್ ನೂರು ರಶೀದ್ ವಿಟ್ಲ , ರಶೀದ್ ದರ್ಬೆ, ಅಬೂಬಕ್ಕರ್ ಮಿಹ್ ರಾಜ್,ಇಕ್ಬಾಲ್ ಉಕ್ಕುಡ, T.H.M.A ಹಮೀದ್ ,T.H.M.A ಅನ್ವರ್, ಉಮರ್ , ನೂರುದ್ದೀನ್ ಹಾಗೂ ಬದ್ರೀಯ ಜುಮಾ ಮಸೀದಿ ಉಕ್ಕುಡ, ಜಲಾಲೀಯ್ಯ ಕಮೀಟಿ, ಮುರ್ಶಿದುಲ್ ಅನಾಂ ಸ್ವಲಾತ್ ಕಮೀಟಿ, ಹಿದಾಯ ಫ್ರೆಂಡ್ಸ್ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮುಂಚೆ ವಿಜಯೋತ್ಸವದ ಅಂಗವಾಗಿ ನಾಡಿನ ನಾಗರಿಕರು, ಮುಹಿಸ್ಸು‌ನ್ನ ದರ್ಸ್ ವಿದ್ಯಾರ್ಥಿಗಳು ದರ್ಬೆ, ಕಾನತ್ತಡ್ಕ, ಅಲಂಗಾರು ಮಾರ್ಗವಾಗಿ ವಾಹನ ಜಾಥಾವನ್ನು ನಡೆಸಿದರು.

- Advertisement -

Related news

error: Content is protected !!