Sunday, June 14, 2026
spot_imgspot_img
spot_imgspot_img

ವಿಟ್ಲ: ವಿಠಲ ಎಜುಕೇಶನ್ ಸೊಸೈಟಿ ಇದರ ಆಶ್ರಯದಲ್ಲಿ ಬೇಸಿಗೆ ವಿಶೇಷ ತರಬೇತಿ ಶಿಬಿರ

- Advertisement -
- Advertisement -

ವಿಟ್ಲ : ವಿಠಲ ಎಜುಕೇಶನ್ ಸೊಸೈಟಿ ಇದರ ಆಶ್ರಯದಲ್ಲಿ ಬೇಸಿಗೆ ವಿಶೇಷ ತರಬೇತಿ ಶಿಬಿರ, ಫಿಟ್ನೆಸ್, ವಾಲಿಬಾಲ್, ಶಟ್ಲ್ ಬ್ಯಾಡ್ಮಿಂಟನ್ ಹಾಗೂ ಧ್ಯಾನ ತರಬೇತಿ ಕಾರ್ಯಕ್ರಮವು ಎ.17 ರಿಂದ ಎ. 29ರ ವರೆಗೆ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಆ ಪ್ರಯುಕ್ತ ಎ.17 ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿಠಲ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಠಲ ಎಜುಕೇಶನ್ ಸೊಸೈಟಿಯ ಕೋಶಾಧಿಕಾರಿ ಬಾಬು.ಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಠಲ ಪ್ರೌಢ ಶಾಲೆಯ ನಿವೃತ್ತ ಉಪ ಪ್ರಾಂಶುಪಾಲ ಸುಬ್ರಮಣ್ಯ ಭಟ್, ವಿಠಲ ಎಜುಕೇಶನ್ ಸೊಸೈಟಿಯ ಸದಸ್ಯರಾದ ನಿತ್ಯಾನಂದ ನಾಯಕ್, ಪದ್ಮಯ್ಯ ಗೌಡ, ಸದಾಶಿವ ಬನ ಭಾಗವಹಿಸಿದ್ದರು.

ಪ್ರಾಂಶುಪಾಲ ಆದರ್ಶ ಚೊಕ್ಕಡಿ ಸ್ವಾಗತಿಸಿ, ಉಪನ್ಯಾಸಕಿ ಕೃಪಾ ಪ್ರಾರ್ಥಿಸಿದರು. ಉಪನ್ಯಾಸಕಿ ಮುಕ್ತಶ್ರೀ ವಂದಿಸಿದರು. ಉಪನ್ಯಾಸಕ ಚಂದ್ರಕಾಂತ್ ಕಾರ್ಯಕ್ರಮ ನಿರೂಪಿಸಿದರು. ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಡಿ, ದೈಹಿಕ ಶಿಕ್ಷಕ ಶ್ರೀನಿವಾಸ್ ತರಬೇತುದಾರರಾಗಿ ಶಿಶಿರ್ ಸುಬ್ರಮಣ್ಯ, ಮನೀಶ್ ಉಪಸ್ಥಿತರಿದ್ದರು.

- Advertisement -

Related news

error: Content is protected !!