- Advertisement -
- Advertisement -


ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿನಾಂಕ 01-06-2022 ರಂದು 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಕೆಜಿ ತರಗತಿಗಳು ಆರಂಭವಾಯಿತು.

3 ವರ್ಷ 10 ತಿಂಗಳು ಮೇಲ್ಪಟ್ಟ ಪುಟಾಣಿಗಳು ಪ್ರಥಮ ದಿನ ತುಂಬಾ ಉತ್ಸಾಹದಿಂದ ಅವರ ಹೆತ್ತವರೊಂದಿಗೆ ಉಪಸ್ಥಿತರಿದ್ದರು. ಪುಟಾಣಿಗಳನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳು ಸ್ವಾಗತ ನೃತ್ಯ ಹಾಗೂ ಪುಷ್ಪ ವೃಷ್ಠಿಯ ಮುಖಾಂತರ ಸ್ವಾಗತಿಸಿದರು.

ಈ ಪ್ರಾರಂಭೋತ್ಸವದಲ್ಲಿ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಡಳಿತಾಧಿಕಾರಿ, ಪ್ರಾಂಶುಪಾಲರು ಮತ್ತು ಎಲ್ಲಾ ಶಿಕ್ಷಕ-ಶಿಕ್ಷಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


- Advertisement -








