Monday, June 17, 2024
spot_imgspot_img
spot_imgspot_img

ಪುತ್ತೂರು: ಡಾ.ಪಿ.ಬಿ ರೈ ಪ್ರತಿಷ್ಠಾನ ಕೆಯ್ಯೂರು ಮತ್ತು ಪವಿತ್ರ ವಿವಾ ಎಂಟರ್‌ ಪ್ರೈಸಸ್‌-ನೆಲ್ಯಾಡಿ ಜಂಟಿ ಆಶ್ರಯದಲ್ಲಿ ಕೃಷಿ ಮಾಹಿತಿ ಕಾರ್ಯಗಾರ-ಜಗದಂಬಾ ಎಂಟರ್‌ಪ್ರೈಸಸ್‌ ಸಂಸ್ಥೆಯ ಅನಾವರಣ ಕಾರ್ಯಕ್ರಮ

- Advertisement -G L Acharya panikkar
- Advertisement -

ಪುತ್ತೂರು: ಡಾ.ಪಿ.ಬಿ ರೈ ಪ್ರತಿಷ್ಠಾನ ಕೆಯ್ಯೂರು ಮತ್ತು ಪವಿತ್ರ ವಿವಾ ಎಂಟರ್‌ ಪ್ರೈಸಸ್‌-ನೆಲ್ಯಾಡಿ ಇವರ ಜಂಟಿ ಆಶ್ರಯದಲ್ಲಿ ವಿವಾ ಕಿಸಾನ್‌ ಕಿಂಗ್‌ ಸಾವಯವ ಗೊಬ್ಬರ ಹಾಗೂ ಸಾವಯವ ಕೃಷಿ ಮಾಹಿತಿ ಕಾರ್ಯಗಾರ ಮತ್ತು ಜಗದಂಬಾ ಎಂಟರ್‌ಪ್ರೈಸಸ್‌ ಸಂಸ್ಥೆಯ ಅನಾವರಣ ಕಾರ್ಯಕ್ರಮ ಸುಂದರ್‌ ರಾಮ್‌ ಶೆಟ್ಟಿ ಸಭಾಭವನ (ಬಂಟರ ಭವನ) ದಲ್ಲಿ ನಡೆಯಿತು.

ಡಾ.ಪಿ ಬಿ ರೈ ಪ್ರತಿಷ್ಠಾನದ ಅಧ್ಯಕ್ಷ ಸಹಕಾರ ರತ್ನ ದಂಬೆಕಾನ ಸದಾಶಿವ ರೈ, ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆ. ಸೀತಾರಾಮ ರೈ ಸವಣೂರು ಸಂಚಾಲಕರು ವಿದ್ಯಾ ಸಮೂಹ ಸಂಸ್ಥೆ ಸವಣೂರು, ಸೇಡಿಯಾಪು ಜನಾರ್ಧನ ಭಟ್‌ ಕೃಷಿಕರು ಪುತ್ತೂರು, ರಾಧಕೃಷ್ಣ ಬೋರ್ಕರ್‌ ಮಾಜಿ ತಾಲೂಕು ಪಂಚಾಯತ್‌ ಅಧ್ಯಕ್ಷರು, ಗುಂಡ್ಯಡ್ಕ ವಾಸು ಪೂಜಾರಿ ಕೃಷಿಕರು ಅರಿಯಡ್ಕ ಇವರುಗಳು ಉದ್ಘಾಟಿಸಿದರು.

ಡಾ.ಪಿ ಬಿ ರೈ ಪ್ರತಿಷ್ಠಾನದ ಗೌರವಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಪ್ರಸ್ತಾವಿಕದೊಂದೊಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಶಿಕುಮಾರ್‌ ರೈ ಬಾಲ್ಯೊಟ್ಟು, ಬೂಡಿಯಾರ್‌ ರಾಧಕೃಷ್ಣ ರೈ, ದಯಾನಂದ ರೈ ಮನವಳಿಕೆ, ಬಾಲಕೃಷ್ಣ ಬಾಣಜಾಲು, ಪಂಜಿಗದ್ದೆ ಈಶ್ವರಭಟ್‌, ಬಂಗಾರಡ್ಕ ವಿಶ್ವೇಶ್ವರ ಭಟ್‌, ಜಯಂತ ನಡುಬೈಲು, ಅಬೂಬಕ್ಕರ್‌ ಮುಲಾರ್‌, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಜಗದಂಬಾ ಎಂಟರ್‌ಪ್ರೈಸಸ್‌ ಸಂಸ್ಥೆಯನ್ನು ಡಾ.ಪಿ ಬಿ ರೈ ಪ್ರತಿಷ್ಠಾನದ ಅಧ್ಯಕ್ಷ ಸಹಕಾರ ರತ್ನ ದಂಬೆಕಾನ ಸದಾಶಿವ ರೈಯವರು ಅನಾವರಣಗೊಳಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು.

ಸಾಹಿತಿ ಮಲ್ಲಿಕಾ ಜೆ ರೈ ಪ್ರಾರ್ಥಿಸಿ, ಡಾ. ರಾಜೇಶ್‌ ಬೆಜ್ಜಂಗಳ ಪ್ರಧಾನ ಕಾರ್ಯದರ್ಶಿ ಡಾ.ಪಿ ಬಿ ರೈ ಪ್ರತಿಷ್ಠಾನ ಧನ್ಯವಾದಗೈದರು. ಬಾಲಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ’ವಿಷಮುಕ್ತ ಭೂಮಿ-ರೋಗಮುಕ್ತ ಭಾರತ’ ಎನ್ನುವ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿದ ಹಾಸನ ಜಿಲ್ಲೆಯ ಕೃಷಿ ತಜ್ಞ ಜಯಕುಮಾರ್‌ ಉಡುವಾರೆ ಹಾಗೂ ತುರುವೆಕೆರೆಯ ಸಾವಯವ ಕೃಷಿ ತಜ್ಞ ಶಿವಶಂಕರ್‌ ಡಿ.ಸಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಬಳಿಕ ’ವಿಷಮುಕ್ತ ಭೂಮಿ-ರೋಗಮುಕ್ತ ಭಾರತ’ ಎನ್ನುವ ವಿಚಾರದ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ಕಾರ್ಯಕ್ರಮದಲ್ಲಿ ಡಾ.ಪಿ.ಬಿ ರೈ ಪ್ರತಿಷ್ಠಾನದ ಎಲ್ಲಾ ಸದಸ್ಯರು, ಸೇರಿದಂತೆ ಹಲವಾರು ಕೃಷಿ ಪ್ರಿಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!