Friday, April 26, 2024
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸಿಸ್ ಶಾಲೆಯಲ್ಲಿ ಹಲಸಿನ ಘಮ ಘಮ.!

- Advertisement -G L Acharya panikkar
- Advertisement -

ವಿಟ್ಲ : ಮನುಷ್ಯನ ಬದುಕಿಗೆ ಪ್ರಕೃತಿ ನೀಡಿದ ದೇಣಿಗೆ ಅಪಾರ. ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿನಾಂಕ 25.06.2022 ರಂದು ನಡೆದಿತ್ತು ಹಲಸಿನ ಸದ್ದು.

ಶಾಲೆಯ ವಠಾರದಲ್ಲೇ ಬೆಳೆದ ಹಲಸಿನಕಾಯಿಯನ್ನು ಕೊಯ್ದು ಶಾಲಾ ಈಕೋ ಕ್ಲಬ್ ನ ನೇತೃತ್ವದಲ್ಲಿ, ಎಲ್ಲ ಸದಸ್ಯ ಮಕ್ಕಳು ಸೇರಿ ಹಲಸನ್ನು ಬಿಡಿಸಿ ಸೊಳೆ ತೆಗೆದು ಆಟಿ ಕೂಟದ ಖಾದ್ಯಕ್ಕೆ ಉಪ್ಪುಸೊಳೆ ಹಾಕಲಾಯಿತು. ಇಂದಿನ ಮಕ್ಕಳಿಗೆ ಮನೆಯಲ್ಲಿ ಈ ಅವಕಾಶವಿಲ್ಲದೆ ಗ್ರಾಮ್ಯ ಸೊಗಡಿನಿಂದ ದೂರ ಉಳಿದವರಿಗೆ ಈ ಆಚರಣೆ ಒಂದು ತರಬೇತಿ ಎನಿಸಿತು. ಇಕೋ ಕ್ಲಬ್ ನ ಉದ್ಘಾಟನೆಯನ್ನು ಸಂಸ್ಥೆಯ ಪ್ರಾಂಶುಪಾಲ ಜಯರಾಮ್ ರೈರವರು ಹಲಸಿನ ಕಾಯಿಯನ್ನು ತುಂಡರಿಸಿ ನೆರವೇರಿಸಿದರು.

ತುಳುನಾಡಿನ ವಿಶಿಷ್ಟ ತಿನಿಸುಗಳಲ್ಲಿ ಒಂದಾದ ಉಪ್ಪಡ್ ಪಚ್ಚಿಲ್ (ಉಪ್ಪು ಸೊಳೆ ) ಶೇಖರಣೆಯ ಬಗ್ಗೆ ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ಅನುಭವಿಸಿದ್ದಲ್ಲದೆ ಕೂಡು ಕುಟುಂಬದ ಶ್ರಮದ ಬಗ್ಗೆ ನೆನವರಿಸಿದರು. ಪ್ರಕೃತಿಯು ತಾನು ಬೆಳೆದ ಹಣ್ಣನ್ನು ಇತರರಿಗೆ ನೀಡಿ ನಿಸ್ವಾರ್ಥ ಮೆರೆಯುತ್ತದೆ ಎನ್ನುವುದು ಅಲ್ಲದೆ ಇದರ ಸಂತೋಷದ ಅರಿವಿಲ್ಲಿದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ರಾಧಾಕೃಷ್ಣ ಎ ಉಪಸ್ಥಿತರಿದ್ದು ಸಹಕರಿಸಿದರು. ಉಪಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ ಹಾಗೂ ಹೇಮಲತಾ, ಶಿಕ್ಷಕ ಹಾಗು ಶಿಕ್ಷಕೇತರ ವೃಂದದವರು ಸಹಕರಿಸಿದರು.

- Advertisement -

Related news

error: Content is protected !!