Monday, May 20, 2024
spot_imgspot_img
spot_imgspot_img

ವಿಟ್ಲ: ವಿ.ಹಿಂ.ಪ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಆಶ್ರಯದಲ್ಲಿ 6ನೇ ವರ್ಷದ ದೀಪಾವಳಿ – ಗೋಪೂಜೆ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಆಶ್ರಯದಲ್ಲಿ ೬ ನೇ ವರ್ಷದ ದೀಪಾವಳಿ- ಗೋಪೂಜೆ ಕಾರ್ಯಕ್ರಮ ನಡೆಯಿತು.

ಗ್ರಾಮದ ಭಕ್ತಾದಿಗಳಿಂದ ಭಜನಾ ಕಾಯಕ್ರಮ ನಡೆಯಿತು. ಬಳಿಕ ಗೋಮಾತೆಗೆ ಪೂಜಾ ವಿಧಿ ವಿಧಾನಗಳ ಮೂಲಕ ಗೋಪೂಜೆಯನ್ನು ನಡೆಸಲಾಯಿತು. ಬಳಿಕ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಿತು. ಭಾರತ ಮಾತೆಗೆ ಪುಷ್ಪಾರ್ಚನೆಗೈಯುವ ಮೂಲಕ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ|ಶ್ರೀ ಕೃಷ್ಣ ಪ್ರಸನ್ನ ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ, ಭರತ್ ಕುಮ್ಡೆಲು ಸಂಚಾಲಕರು ಬಜರಂಗದಳ ಪುತ್ತೂರು ಜಿಲ್ಲೆ, ಸಚಿನ್ ಅಡ್ವಾಯಿ ಮೊಕ್ತೇಸರರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಪೆರುವಾಯಿ, ಮಂಜುನಾಥ ಆಚಾರ್ಯ.

ಗೌರವಾಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕ, ಶೇಖರ ಪೂಜಾರಿ ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕ, ವಿಶ್ವ ಹಿಂದೂ ಪರಿಷತ್ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿಯ ಸಂಚಾಲಕ ಮೋಕ್ಷಿತ್ ಪೆರುವಾಯಿ, ಹಿರಿಯ ಸಾಹಿತಿ ಸವಿತಾ ಎಸ್. ಭಟ್ ಅಡ್ವಾಯಿ, ಪಶು ವೈದ್ಯಾಧಿಕಾರಿ ಶ್ರೀ ಈಶ್ವರ ಭಟ್ ಕಾಶೀಮಠ, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪ್ರಮುಖರಾದ ಪ್ರಭಾಕರ ಶೆಟ್ಟಿ ಕಲೈತ್ತಿಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಳೆದ 30 ವರ್ಷಗಳಿಂದ ಪಶುವೈದ್ಯಾಧಿಕಾರಿಯಾಗಿ ಇರುಳು ಹಗಲೆನ್ನದೆ 7 ಗ್ರಾಮಗಳಲ್ಲಿ ಪ್ರಾಮಾಣಿಕ ಸೇವೆಯನ್ನು ನೀಡುತ್ತಾ ಬಂದಿರುವ ಶ್ರೀ ಈಶ್ವರ ಭಟ್ ಕಾಶೀಮಠ ಇವರನ್ನು ಹಾಗೂ 2020-21ನೇ ಶೈಕ್ಷಣಿಕ ಸಾಲಿನ ಗ್ರಾಮದಲ್ಲಿ ಅತ್ಯಧಿಕ ಅಂಕಗಳಿಸಿದ ಶ್ರೀ ಕೃಷ್ಣ ಉಪಧ್ಯಾಯ, ಅಭಿರಾಮ್ ಕೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರನ್ನು, ಎಲ್ಲಾ ಹಿಂದೂ ಬಾಂಧವರನ್ನು ಯತೀಶ್ ಪೆರುವಾಯಿ ಸ್ವಾಗತಿಸಿ, ಶೇಖರ ಪೂಜಾರಿ ವಂದಿಸಿದ್ರು. ವರ್ಷಿತಾ, ಶಾಶ್ವಿತ, ಜೀವಿತಾ ಪ್ರಾರ್ಥಿಸಿದ್ರು. ಅಶ್ವಿನಿ ಪೆರುವಾಯಿ ಸಂಘದ ವೈಯಕ್ತಿಕ ಗೀತೆ ಹಾಡಿದರು. ಮೋಕ್ಷಿತ್ ಪೆರುವಾಯಿ ಮತ್ತು ರಕ್ಷಿತ್ ಆಚಾರ್ಯ ಸನ್ಮಾನ ಪತ್ರ ವಾಚಿಸಿದ್ರು. ನಾಗೇಶ್ ಮಾಸ್ತರ್ ಕೊಲತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!