Friday, March 29, 2024
spot_imgspot_img
spot_imgspot_img

ವಿಟ್ಲ: ಶಾಸಕ ಯು.ಟಿ ಖಾದರ್ ಆಪ್ತ ಸಂಬಂಧಿಗಳ HONEST ಬಸ್ RTO ಅಧಿಕಾರಿಗಳ ವಶ

- Advertisement -G L Acharya panikkar
- Advertisement -

ವಿಟ್ಲ- ಪೆರ್ಲ – ಪಾಣಾಜೆ – ಪುತ್ತೂರು ಮಾರ್ಗವಾಗಿ ಓಡಾಡುತ್ತಿದ್ದ ಖಾಸಗಿ HONEST ಬಸ್ ಪರವಾನಿಗೆ ಇಲ್ಲದೆ ಅನೇಕ ದಿನಗಳಿಂದ ಓಡಾಡುತ್ತಿತ್ತು. ಕೆಲವು ದಿನಗಳ ಹಿಂದೆ RTO ಅಧಿಕಾರಿಗಳು ತಪಾಸಣೆ ವೇಳೆ ಪರವಾನಿಗೆ ಇಲ್ಲದೆ ಬಸ್ ಓಡಿಸುತ್ತಿರುವುದು ಕಂಡುಬಂದಿದೆ.

ಅದಲ್ಲದೆ ಬಸ್ಸಿನ ತೆರಿಗೆ ಪಾವತಿ ಮಾಡದಿರುವುದು ಈ ವೇಳೆ ಬೆಳಕಿಗೆ ಬಂದಿದೆ. ಕರ್ನಾಟಕ ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರ ಸಹೋದರ ಸಂಬಂಧಿ ಮೊಹಮ್ಮದ್ ಇಕ್ಬಾಲ್ ಮಾಲಕತ್ವದ HONEST ಎಂಬ ಖಾಸಗಿ ಬಸ್ ಪರವಾನಿಗೆ ಇಲ್ಲದೆ ದಿನಾಲೂ ರಾಜಾರೋಷವಾಗಿ ಓಡಾಡುತ್ತಿತ್ತು. ಕೆಲವು ದಿನಗಳ ಹಿಂದೆ RTO ದಕ್ಷ ಅಧಿಕಾರಿ ಚರಣ್ ಕುಮಾರ್ ನೇತೃತ್ವದ ತಂಡ ತಪಾಸಣೆ ನಡೆಸಿದ ವೇಳೆ ಬಸ್ ಪರವಾನಿಗೆ ಇಲ್ಲದೆ ಓಡಾಡುತ್ತಿರುವುದು ಹಾಗೂ 30-06-2021 ರ ನಂತರ ಬಸ್ಸಿನ ತೆರಿಗೆ ಪಾವತಿ ಮಾಡದಿರುವುದು RTO ಅಧಿಕಾರಿಗಳ ಗಮನಕ್ಕೆ ಬಂದಿರುತ್ತದೆ.

ಬಸ್ ಮಾಲಕ ಮೊಹಮ್ಮದ್ ಇಕ್ಬಾಲ್

ತಕ್ಷಣ ಬಸ್ಸನ್ನು ವಶಪಡಿಸಿಕೊಂಡ RTO ಅಧಿಕಾರಿಗಳು ವಿಟ್ಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಜನರಿಗೆ ಕಾನೂನು ಪಾಲನೆ ಮಾಡಿ ಎಂದು ಭಾಷಣ ಬಿಗಿಯುವ ಶಾಸಕರಿಗೆ ತಮ್ಮ ಸಂಬಂಧಿಕರಲ್ಲಿ ಕಾನೂನು ಪಾಲನೆ ತಿಳಿಸಲಿಲ್ಲವೇ? ಅಥವಾ ಶಾಸಕರು ನಮ್ಮ ಸಂಬಂಧಿ ಏನೇ ಆದರೂ ಅವರಿದ್ದಾರೆ ಎಂಬ ಹುಂಬು ಧೈರ್ಯದಿಂದ ಪರವಾನಿಗೆ ಇಲ್ಲದ ಬಸ್ಸನ್ನು ಓಡಿಸುತ್ತಿದ್ದಾರೆಯೇ? ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇವೆಲ್ಲದುದರ ನಡುವೆ ಅಕ್ರಮವಾಗಿ ಓಡಾಡುತ್ತಿದ್ದ ಬಸ್ಸನ್ನು RTO ಅಧಿಕಾರಿಗಳು ವಶಪಡಿಸಿಕೊಂಡಿರುವುದು ಇವರ ಪ್ರಾಮಾಣಿಕ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪರವಾನಿಗೆ ಇಲ್ಲದೆ ಮತ್ತು ತೆರಿಗೆ ಕಟ್ಟದೆ ರಸ್ತೆಯಲ್ಲಿ ಸಂಚಾರಿಸುವ ಮೂಲಕ ಬಡ ಪ್ರಯಾಣಿಕರ ಬದುಕಿನಲ್ಲಿ ಚೆಲ್ಲಾಟ ವಾಡುತ್ತಿದ್ದರೆಯೇ? ಎಂದು ನಿತ್ಯ ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

- Advertisement -

Related news

error: Content is protected !!