Friday, May 3, 2024
spot_imgspot_img
spot_imgspot_img

‘ಬೇರ’ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಕನ್ನಡ ಧಾರವಾಹಿಗಳ ಪ್ರಮುಖ ನಟ ದವಲ್ ದೀಪಕ್

- Advertisement -G L Acharya panikkar
- Advertisement -

ದವಲ್ ದೀಪಕ್ ಕನ್ನಡದ ಹಲವು ಧಾರವಾಹಿಯಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಸೈ ಎನಿಸಿಕೊಂಡ ನಟ. ಮೂಲತಃ ಬೆಂಗಳೂರಿನಲ್ಲಿ ಜನಿಸಿದ ಇವರು ತಮ್ಮ ವಿದ್ಯಾಭ್ಯಾಸದ ನಂತರ ಪೂರ್ಣ ಪ್ರಮಾಣದಲ್ಲಿ ನಟನಾ ರಂಗಕ್ಕೆ ಎಂಟ್ರಿ ಕೊಟ್ಟವರು.

ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನಾ ತರಬೇತಿಯನ್ನು ಮತ್ತು ಕೃಷ್ಣ ಮೂರ್ತಿ ಕವತ್ತಾರ್ ರವರಿಂದ ವೈಯಕ್ತಿಕ ನಟನಾ ತರಬೇತಿಯನ್ನು ದವಲ್ ದೀಪಕ್ ಪಡೆದಿರುತ್ತಾರೆ.

ಕನ್ನಡಿಗರ ಮನಗೆದ್ದ ಧಾರವಾಹಿಗಳಾದ ಚಿಟ್ಟೆಹೆಜ್ಜೆ, ಅರಗಿಣಿ, ನಿಹಾರಿಕ ಮುಂತಾದ ಧಾರವಾಹಿಗಳಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ ಕಲಾವಿದ ದವಲ್ ದೀಪಕ್.

ಸಿನಿಮಾರಂಗಕ್ಕೆ ಎಂಟ್ರಿ ಕೊಡಬೇಕು ಎಂದು ಕನಸು ಹೊತ್ತಿದ್ದ ದವಲ್ ದೀಪಕ್ ರವರಿಗೆ ಸಿಕ್ಕ ದೊಡ್ಡ ಅವಕಾಶ ಅಂದ್ರೆ ಅದು ‘ಬೇರ’ ಸಿನಿಮಾ.

ವಿಭಿನ್ನ ಕಥಾ ಹಂದರವನ್ನೂಳಗೊಂಡ ಬೇರ ಸಿನಿಮಾ ದವಲ್ ದೀಪಕ್ ರವರ ಮೊದಲ ಸಿನಿಮಾ. ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ಮೂಡಿಬಂದ, ಉದ್ಯಮಿ ದಿವಾಕರ್ ದಾಸ್ ನೇರ್ಲಾಜೆ ನಿರ್ಮಾಣದ, ವಿನು ಬಳಂಜ ನಿರ್ದೇಶನದ ಬೇರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ ದವಲ್ ದೀಪಕ್.

“ಬೇರ ಚಿತ್ರ ತಂಡದಲ್ಲಿ ಕೆಲಸ ಮಾಡಿರುವುದು ತುಂಬಾ ಖುಷಿ ತಂದಿದೆ.. ಇದು ನನ್ನ ಮೊದಲ ಸಿನಿಮಾ.. ಜೊತೆಗೆ ಸಿನಿಮಾ ರಂಗದ ಮೊದಲ ಅನುಭವ.. ಬೇರ ಅಂದರೆ ವ್ಯಾಪಾರ ಎಂದು ಅರ್ಥ.. ವ್ಯಾಪಾರ ಅಂದ್ರೆ ಕೇವಲ ವಸ್ತುಗಳ ಮಾರಾಟ ಅಲ್ಲಾ.. ಬದಲಾಗಿ ಮನುಷ್ಯ – ಮನುಷ್ಯರ ನಡುವಿನ ಮಾರಾಟದ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ… ಅವರವರ ಲಾಭಕ್ಕೆ, ಅವರೊಳಗಿನ ದ್ವೇಷ ತೀರಿಸಿಕೊಳ್ಳಲು ಅಮಾಯಕರನ್ನು ಯಾವ ರೀತಿ ಬಳಸಿಕೊಂಡು ಬಿಸಾಡ್ತಾರೆ ಅನ್ನೋದು ಈ ಸಿನಿಮಾ ದಲ್ಲಿ ಬಹಳ ಚೆನ್ನಾಗಿ ಮೂಡಿ ಬಂದಿದೆ, ಇಂತಹ ಅದೆಷ್ಟೋ ನೈಜ್ಯ ಘಟನೆಗಳು ಈ ಹಿಂದೆಯೂ ನಡೆದಿದೆ.. ಈಗಲೂ ನಡೆಯುತ್ತಲೇ ಇದೇ.. ಇಂತಹ ವಿಭಿನ್ನ ಕಥಾ ಹಂದರವನ್ನು ಒಳಗೊಂಡ ಬೇರ ಸಿನಿಮಾ ಇದೇ ಜೂನ್ 16 ರಂದು ರಾಜ್ಯಾದ್ಯಂತ ಬಿಡುಗಡೆಗೊಂಡು ಪ್ರದರ್ಶನ ಕಾಣಲಿದೆ.. ಎಲ್ಲರೂ ಈ ಸಿನಿಮಾ ವೀಕ್ಷಿಸಿ ಆ ಮೂಲಕ ಸಿನಿಮಾವನ್ನು ಗೆಲ್ಲಿಸಿ ಎಂದು ಸಿನಿಮಾ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

- Advertisement -

Related news

error: Content is protected !!