

ವಿಟ್ಲ: ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿ ಪೆರುವಾಯಿ ಇದರ ವತಿಯಿಂದ ಆ. 30ರ ಸೋಮವಾರದಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಪೆರುವಾಯಿಯಲ್ಲಿ ಭಜನಾ ಸೇವೆ, ವೈದಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದೊಂದಿಗೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ| ಕೃಷ್ಣ ಮೂರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಪೆರುವಾಯಿ ಇವರು ಧಾರ್ಮಿಕ ಉಪನ್ಯಾಸ ನೀಡಿದರು. ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಅಧ್ಯಕ್ಷರಾದ ಗೀತಾನಂದ ಶೆಟ್ಟಿ ಮಾಣಿಲ ಗುತ್ತು ಮಾತನಾಡಿದರು.

ಆಡಳಿತ ಮೊಕ್ತೇಸರರಾದ ವೆಂಕಪ್ಪ ಮಾರ್ಲ ಕಲಾಯಿತ್ತಿಮಾರು,ಸಚಿನ್ ಭಟ್ ಅಡ್ವಾಯಿ,ಪ್ರಮುಖರಾದ ಆನಂದ ಶೆಟ್ಟಿ ತಾಳಿಪಡ್ಪು ಮುಳಿಯ,ಪೆರುವಾಯಿ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ, ವಿಶ್ವನಾಥ ರೈ ಅಂತರಗುತ್ತು ಉಪಸ್ಥಿತರಿದ್ದರು.
ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿ ಇದರ ಪ್ರಮುಖರಾಗಿರುವ ಪ್ರಭಾಕರ ಶೆಟ್ಟಿ ಸ್ವಾಗತಿಸಿ, ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಅಧ್ಯಕ್ಷರಾದ ಶೇಖರ ಪೂಜಾರಿ ಇವರು ವಂದಿಸಿದರು. ನಾಗೇಶ್ ಮಾಸ್ತರ್ ಕೊಲ್ಲತ್ತಡ್ಕ ಇವರು ಕಾರ್ಯಕ್ರಮ ನಿರೂಪಿಸಿದರು.









