Tuesday, May 7, 2024
spot_imgspot_img
spot_imgspot_img

ಹಾಸನ : ಚುಡಾಯಿಸಿದ ಯುವಕನಿಗೆ ಅಟ್ಟಾಡಿಸಿ ಹೊಡೆದ ಕಾಲೇಜು ವಿದ್ಯಾರ್ಥಿನಿ

- Advertisement -G L Acharya panikkar
- Advertisement -

ಹಾಸನ: ತನ್ನನ್ನು ಚುಡಾಯಿಸಿದ ಯುವಕನಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹಾಸನದಲ್ಲಿ ನಡೆದಿದೆ.

ಕಾಲೇಜಿನಿಂದ ಮನೆಗೆ ತೆರಳುವ ವೇಳೆ ಯುವತಿಯನ್ನು ಚುಡಾಯಿಸಿದ ಯುವಕನೊಬ್ಬ ಆಕೆಯ ಕೈಹಿಡಿದು ಎಳೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಆಕೆ ‘ಪ್ರತಿದಿನ ಹೀಗೆ ಮಾಡುತ್ತೀಯಾ’ ಎಂದು ಯುವಕನಿಗೆ ನಡು ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾಳೆ.

ವಿಚಾರ ತಿಳಿದ ಜನಸಾಮಾನ್ಯರು ಯುವಕನಿಗೆ ತಮ್ಮ ಕೈಯಲ್ಲಾದ ಗೂಸ ನೀಡಿದ್ದಾರೆ. ಹಾಸನ ನಗರದ ಬಿಎಸ್‌ಎನ್‌ಎಲ್ ಭವನದ ಬಳಿ ಈ ಘಟನೆ ನಡೆದಿದ್ದು ಹಾಸನ ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

- Advertisement -

Related news

error: Content is protected !!