Monday, May 6, 2024
spot_imgspot_img
spot_imgspot_img

ವಿಟ್ಲ: ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ವ್ಯಾಪ್ತಿಯ ವಿಟ್ಲಮುಡ್ನೂರು ಉಪಕೇಂದ್ರದಲ್ಲಿ ವಿಶ್ವ ಸೊಳ್ಳೆ ದಿನಾಚರಣೆ

- Advertisement -G L Acharya panikkar
- Advertisement -

ವಿಟ್ಲ: ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ವ್ಯಾಪ್ತಿಯ ವಿಟ್ಲಮುಡ್ನೂರು ಉಪಕೇಂದ್ರದಲ್ಲಿ ಸೆ. 29 ರಂದು ವಿಶ್ವ ಸೊಳ್ಳೆ ದಿನಾಚರಣೆ ಆಚರಿಸಲಾಯಿತು.

ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ ಕೀಟಜನ್ಯ ಆಶ್ರಿತ ರೋಗಗಳ ಬಗ್ಗೆ ವಿವರಿಸುತ್ತಾ ಬಿಟ್ಟು- ಬಿಟ್ಟು ಮಳೆ ಬರುತ್ತಿರುವುದರಿಂದ ಸೊಳ್ಳೆಗಳು ವಂಶಾಭಿವೃದ್ಧಿಗೆ ಪೂರಕವಾಗಿದ್ದು, ಸಾರ್ವಜನಿಕರು ಹೆಚ್ಚಿನ ಜವಾಬ್ದಾರಿಯಿಂದ ಸೊಳ್ಳೆಗಳ ನಿಯಂತ್ರಣ ಕಾರ್ಯವನ್ನು ಕೈಗೊಳ್ಳುವಂತೆ ವಿನಂತಿಸಿದರು.

ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆವಹಿಸಿ ಟೈಯರ್ ಗಳ ತೆಂಗಿನ ಗೆರಟೆ ಸಿಯಾಳ ಹೂವಿನ ಕುಂಡಗಳು ಮನೆಯ ಮೇಲ್ಚಾವಣಿ ಗಳಲ್ಲಿ ನೀರು ನಿಲ್ಲುವ ಸಾಧ್ಯತೆಗಳಿರುವುದರಿಂದ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನ ಅತ್ಯಗತ್ಯ ಎಂಬುದಾಗಿ ತಿಳಿಸಿದರು.

ವಿಟ್ಲಮುಡ್ನೂರು ಉಪಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಕೀರ್ತಿ ಕಾರ್ಯಕ್ರಮವನ್ನು ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ಶ್ಯಾಮಲಾ ವಂದಿಸಿದರು ಆಶಾ ಕಾರ್ಯಕರ್ತರಾದ ಉಮಾವತಿ ರಾಜೀವಿ ಹಾಗೂ ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಉಮೇಶ್ ಗೌಡ ಉಪಸ್ಥಿತರಿದ್ದರು.

driving
- Advertisement -

Related news

error: Content is protected !!