Sunday, June 14, 2026
spot_imgspot_img
spot_imgspot_img

ವಿಟ್ಲ: ಹಾಡಹಗಲೇ ಮದ್ಯದ ಅಮಲಿನಲ್ಲಿ ಕತ್ತಿಯಿಂದ ಹಲ್ಲೆ; ಓರ್ವ ಗಂಭೀರ

- Advertisement -
- Advertisement -

ವಿಟ್ಲ : ಹಾಡಹಗಲೇ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆಮಾತು ಬೆಳೆದು ಹಲ್ಲೆಗೊಳಗಾದ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆಗೈಯಲಾಗಿದೆ. ಈ ಘಟನೆ ಅಡ್ಯನಡ್ಕದ ಪುಣಚ ಸೊಸೈಟಿ ಮುಂಭಾಗ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆಯಿಂದ ಗಂಭೀರ ಗಾಯಗೊಂಡವರನ್ನುಕೊಲ್ಲಪದವು ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ. ಸದ್ಯ ಗಂಭೀರ ಗಾಯಗೊಂಡಿರುವ ದಿನೇಶ್ ನನ್ನು ಪುತ್ತೂರು ಸರಕಾರಿ ಆಸ್ಪತ್ರೆ ಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಸಲಾಗುತ್ತಿದೆ.

- Advertisement -

Related news

error: Content is protected !!