

ವಿಟ್ಲ: 14 ವರ್ಷದ ಹಿಂದೂ ಬಾಲಕಿ ಸಾವಿಗೆ ನ್ಯಾಯ ಸಿಗಬೇಕು ಮತ್ತು ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಕೊಡಗು ಜಿಲ್ಲೆಗಳಲ್ಲಿ ಮೇ 9ರ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರೆ ನೀಡಿದೆ.
ಕನ್ಯಾನದ ಕಾಣಿಯೂರು ಗ್ರಾಮದ ಸಂಜೀವ ಎಂಬವರ ಪುತ್ರಿಯನ್ನು ಪ್ರೀತಿ ಪ್ರೇಮದ ನಾಟಕವಾಡಿ, ಅವಳನ್ನು ವಶೀಕರಣಕೋಸ್ಕರ ವಾಮಾಚಾರದಂತಹ ಕೃತ್ಯ ನಡೆಸಿ, 9 ನೇ ತರಗತಿಯ ವಿದ್ಯಾರ್ಥಿನಿ ಆತ್ಮಿಕಾಳಾ ಸಾವಿಗೆ ಕಾರಣನಾದ ಸಾಹುಲ್ ಹಮೀದಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಸೋಮವಾರ ಬೆಳಿಗ್ಗೆ 09 ಮೇ 2022 ದಂದು ಮಂಗಳೂರು ವಿಭಾಗದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಸೋಮವಾರ ಸ್ವಯಂ ಪ್ರೇರಿತ ಕನ್ಯಾನ ಬಂದ್ ಕೂಡ ನಡೆಯಲಿದ್ದು ಬೆಳಿಗೆ 10 ಗಂಟೆಗೆ ಕನ್ಯಾನ ಪೇಟೆಯಲ್ಲಿ ಪ್ರತಿಭಟನೆ ನಡೆಯಲಿದೆ.
ಬೇಡಿಕೆಗಳು
1) ಸಾವಿಗೀಡಾದ ಆತ್ಮಿಕಾಳ ಮೇಲೆ ಅತ್ಯಾಚಾರ ನಡೆಸಿ ಕೊಲೆಮಾಡಿರಬೇಕೆಂಬ ಸಂಶಯ ವ್ಯಕ್ತವಾಗುತ್ತಿದ್ದು ಅದರಿಂದ ಈ ಪ್ರಕರಣವನ್ನು ಉನ್ನತಮಟ್ಟದ ತನಿಖೆ ನಡೆಸಬೇಕು.
2 ) ಆತ್ಮೀಕಾಳ ಸಾವಿನ ಹಿಂದೆ ಆರೋಪಿ ಸಾಹುಲ್ ಹಮೀದ್ ನ ಕುಟುಂಬದವರ ಕುಮ್ಮಕ್ಕು ಇದೆ ಅವರನ್ನು ಈ ಪ್ರಕರಣದಲ್ಲಿ ಬಂಧನ ಮಾಡಿ ಕೇಸು ದಾಖಲಿಸಬೇಕು.
3) ಆತ್ಮೀಕಾಳ ಕುಟುಂಬಕ್ಕೆ ಸರಕಾರ 10 ಲಕ್ಷ ಪರಿಹಾರ ಕೊಡಬೇಕು.
4) ರಾಜ್ಯದಲ್ಲಿ ಲವ್ ಜಿಹಾದ್ ತಡೆಗೆ ಕಾನೂನು ತರಬೇಕು.
ಈ ಎಲ್ಲಾ ಬೇಡಿಕೆಗಳನ್ನು ಆಗ್ರಹಿಸಿ ಮತ್ತು ಅವಳ ಸಾವಿಗೆ ನ್ಯಾಯ ಸಿಗುವ ತನಕ ಹೋರಾಟವನ್ನು ಕೈಗೊಳಲಿದ್ದು, ಎಲ್ಲ ಬಂದುಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲು ವಿನಂತಿಸುತ್ತೇವೆ.
ಸುದ್ಧಿಗೋಷ್ಟಿಯಲ್ಲಿ ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆಆರ್ ವಿಹಿಂಪ ಜಿಲ್ಲಾ ಕಾರ್ಯದರ್ಶಿ ಸುದ್ಧಿಗೋಷ್ಟಿಯಲ್ಲಿ ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆಆರ್, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಭಾಸ್ಕರ ಧರ್ಮಸ್ಥಳ, ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ, ವಿಟ್ಲ ಪ್ರಖಂಡದ ಅಧ್ಯಕ್ಷ ಪದ್ಮನಾಭ್ ವಿಟ್ಲ, ವಿಟ್ಲ ಪ್ರಖಂಡ ತಾಲೂಕು ಸಂಚಾಲಕ ಚಂದ್ರಹಾಸ್ ಕನ್ಯಾನ ಉಪಸ್ಥಿತರಿದ್ದರು.
