Wednesday, May 15, 2024
spot_imgspot_img
spot_imgspot_img

ವಿಟ್ಲ: ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರ ಹಾಗೂ ವಿಶ್ವ ಸೊಳ್ಳೆ ದಿನಾಚರಣೆ 2021 ಅಂಗವಾಗಿ ಡೆಂಗ್ಯೂ, ಮಲೇರಿಯಾ ನಿರ್ಮೂಲನ ಮಾಹಿತಿ ಸಭೆ

- Advertisement -G L Acharya panikkar
- Advertisement -
driving

ವೀರಕಂಭ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಹಾಗೂ ಇದರ ಉಪಕೇಂದ್ರ ವೀರಕಂ ಮತ್ತು ಗ್ರಾಮ ಪಂಚಾಯತ್ ವೀರಕಂ ಇದರ ಸಹಯೋಗದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರ ಹಾಗೂ ವಿಶ್ವ ಸೊಳ್ಳೆ ದಿನಾಚರಣೆ 2021 ಅಂಗವಾಗಿ ಡೆಂಗ್ಯೂ ಹಾಗೂ ಮಲೇರಿಯಾ ನಿರ್ಮೂಲನ ಮಾಹಿತಿ ಸಭೆಯು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭದಲ್ಲಿ ನಡೆಯಿತು.

ಆರೋಗ್ಯದ ವಿಚಾರವಾಗಿ ಯಾರೂ ಯಾವುದೇ ರೀತಿಯ ಉದಾಸೀನ ಸಲ್ಲದು. ಸರಕಾರದ ವ್ಯವಸ್ಥೆ ಯು ಪ್ರತಿ ಹಂತದಲ್ಲೂ ನಿಧಿ೯ಷ್ಟತೆಯನ್ನು ಹೊಂದಿದ್ದು ಪಾರದವಶ೯ಕತೆಯನ್ನು ತೋರುತ್ತದೆ. 18 ವಷ೯ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ನೀಡುವ ಕೊರೋನಾ ಲಸಿಕೀರಕಣದ ಉದ್ದೇಶವೇ ಆರೋಗ್ಯ ಮತ್ತು ಸಧೃಢ ಸಮಾಜದ ನಿಮಾ೯ಣವಾಗಿದೆ. ಇದರ ಸದುಪಯೋಗ ಎಲ್ಲರೂ ಪಡೆದು ಆರೋಗ್ಯವಂತರಾಗಬೇಕು ಹಾಗೂ ತಮ್ಮ ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಂಡು ಡೆಂಗ್ಯೂ ಹಾಗೂ ಮಲೇರಿಯಾ ಮುಕ್ತ ಗ್ರಾಮವನ್ನಾಗಿ ಸಬೇಕು ಎಂದು ವಿಟ್ಲ ಸಮುದಾಯ ಕೇಂದ್ರದ ಹಿರಿಯ ಆರೋಗ್ಯ ಸುರಕ್ಷ ಅಧಿಕಾರಿ ಶ್ರೀಮತಿ ಇಂದಿರಾ ನಾಯ್ಕರವರು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಸದಸ್ಯ ಜಯಪ್ರಸಾದ್, ಸಂದೀಪ್, ಮೀನಾಕ್ಷಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಜ್ಯೋತಿ ಕೆ. ಎನ್, ಮತ್ತು ಜ್ಯೋತಿ ಪಿ ,ಆಶಾ ಕಾರ್ಯಕರ್ತೆಯರಾದ ಲೀಲಾವತಿ, ಕೋಮಲಾಕ್ಷಿ, ಮಜಿ ಅಂಗನವಾಡಿ ಶಿಕ್ಷಕಿ ಸುಮತಿ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!